14 ವರ್ಷದ ಬಾಲಕನಲ್ಲಿ ಮೆದುಳು ತಿನ್ನೋ ಅಮೀಬಾ ಪತ್ತೆ – ಕೇರಳದಲ್ಲಿ 4ನೇ ಪ್ರಕರಣ ಪತ್ತೆ

ಮಂಗಳೂರು(ಕೊಯಿಕ್ಕೋಡ್‌): ಕೇರಳದಲ್ಲಿ ಮೇ ತಿಂಗಳಿನಿಂದ ಮೆದುಳು ತಿನ್ನುವ ಅಮೀಬಾಗೆ 15 ವರ್ಷದೊಳಗಿನ ಮೂವರು ಬಾಲಕರು ಮೃತ ಪಟ್ಟಿದ್ದು, ಇದೀಗ ಕೊಯಿಕ್ಕೋಡ್‌ನಲ್ಲಿ ನಾಲ್ಕನೇ ಪ್ರಕರಣ ಪತ್ತೆಯಾಗಿದೆ. ಪಯೋಲಿಯ ಅನ್ನೋ 14 ವರ್ಷದ ಬಾಲಕನಲ್ಲಿ ಮೆದುಳು ತಿನ್ನುವ ಅಮೀಬಾ ಪತ್ತೆಯಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜು.1ರಂದು 14 ವರ್ಷದ ಬಾಲಕ ಆಸ್ಪತ್ರೆಗೆ ದಾಖಲಾಗಿದ್ದನು. ಪರೀಕ್ಷೆ ನಡೆಸಿದ ವೈದ್ಯರು ಅಮೀಬಾ ಇರೋದನ್ನ ಪತ್ತೆ ಮಾಡಿದ್ದಾರೆ. ಸದ್ಯ ವಿದೇಶದಿಂದ ಔಷಧ ತರಿಸಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಅಮೀಬಾ ಹೇಗೆ ಬರುತ್ತೆ?
ಮೆದುಳು ತಿನ್ನುವ ಈ ವಿಚಿತ್ರ ಅಮೀಬಾ ನೀರಿನಿಂದ ಮಕ್ಕಳ ದೇಹ ಸೇರುತ್ತದೆ. ಸ್ವಿಮ್ಮಿಂಗ್ ಫೂಲ್, ಕೆರೆ ಕಟ್ಟೆಗಳ ನೀರಿನಿಂದ ಅಮೀಬಾ ಮಕ್ಕಳ ದೇಹ ಸೇರುತ್ತದೆ.

ಅಮೀಬಾ ನಾಲ್ಕನೇ ಪ್ರಕರಣ ಪತ್ತೆಯಾದ ಕೂಡಲೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕಲುಷಿತ ನೀರಿನಲ್ಲಿ ಸ್ನಾನ ಮಾಡದಂತೆ ಜನರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಜೊತೆಗೆ ಸ್ವಿಮ್ಮಿಂಗ್ ಫೂಲ್, ಕೆರೆ ಕಟ್ಟೆಗಳ ನೀರನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here