ಮಂಗಳೂರು: ಎಂಎಫ್ಸಿ ಸಂಸ್ಥೆಯ ಫರ್ಝಿ ಕೆಫೆ ಮತ್ತು ಎಂಎಫ್ಸಿ ಬೊಂಡಾ ಮಾರ್ಟ್ ನ ನೂತನ ಶಾಖೆ ಮಂಗಳೂರಿನ ಫಳ್ನೀರ್ ಪ್ಯಾಲೇಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಗೋವಾ ರಾಜ್ಯಪಾಲ ಪಿ ಎಸ್. ಶ್ರೀಧರನ್ ಪಿಳ್ಳೈ ಸಂಸ್ಥೆಗೆ ಭೇಟಿ ನೀಡಿ ಶುಭಹಾರೈಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಎಂಎಫ್ಸಿ ಸಂಸ್ಥೆ ಮಾಲಕ ಸಿದ್ದೀಕ್, ಮಾಜಿ ಮೇಯರ್ ಅಶ್ರಫ್, ಎಸ್ಎಲ್ ಭಾರದ್ವಾಜ್ ನೂತನ ಶಾಖೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಗಳೂರಿನಲ್ಲಿ 2012 ರಲ್ಲಿ ಸ್ಥಾಪಿಸಿತವಾದ ಎಂಎಫ್ಸಿ ಸಂಸ್ಥೆ ಈಗ ಜಿಲ್ಲೆಯಲ್ಲೇ ಹೆಸರುವಾಸಿ ಸಂಸ್ಥೆಯಾಗಿದ್ದು ಇದೀಗ ಹತ್ತನೆಯ ಶಾಖೆಯನ್ನು ಆರಂಭಿಸಿದೆ. ಈ ಸಂಸ್ಥೆ ಜಿಲ್ಲೆಯ ಜನರಿಗೆ ನೀಡುವ ಗುಣಮಟ್ಟದ ಸೇವೆಯೇ ಈ ಹಂತಕ್ಕೆ ಇವರನ್ನು ಬೆಳೆಸಿದೆ. ಮುಂದಿನ ದಿನಗಳಲ್ಲಿ ಈ ಎಂಎಫ್ಸಿ ಸಂಸ್ಥೆಯು ದೇಶದಾದ್ಯಂತ ಶಾಖೆ ತೆರೆಯುವಂತಾಗಲಿ ಎಂದು ಶುಭಹಾರೈಸಿದರು. ಬಳಿಕ ಸಂಸ್ಥೆ ಮಾಲಕ ಸಿದ್ದೀಕ್ ಮಾತನಾಡಿ ಕಳೆದ ಹನ್ನೆರಡು ವರ್ಷಗಳಲ್ಲಿ ಸಂಸ್ಥೆಯು ಗುಣಮಟ್ಟದ ಸೇವೆ ನೀಡಿದೆ. ಇದೀಗ ಹತ್ತನೆ ಶಾಖೆಗೆ ಗೋವಾ ರಾಜ್ಯಪಾಲರು ಚಾಲನೆ ನೀಡಿದ್ದಾರೆ. ಮಂಗಳೂರು ಫರ್ಝಿ ಕೆಫೆಯಲ್ಲಿ ವಿವಿಧ ಚಿಕನ್ ಖಾದ್ಯಗಳು ಮತ್ತು ಬೊಂಡ ಮಾರ್ಟ್ ನಲ್ಲಿ ಊರಿನ ಶೈಲಿಯ ಎಳನೀರು, ಚರ್ಮುರಿ ಹೀಗೆ ಹತ್ತು ಹಲವು ಖಾದ್ಯಗಳು ಗ್ರಾಹಕರಿಗೆ ಗುಣಮಟ್ಟದಲ್ಲಿ ನೀಡಲಿದ್ದೇವೆ, ಮಾತ್ರವಲ್ಲದೆ ಶೀಘ್ರದಲ್ಲಿ ಎಂಎಫ್ಸಿ ಇನ್ನೆರಡು ಶಾಖೆ ನಗರದಲ್ಲಿ ಆರಂಭಗೊಳ್ಳಲಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಮುಂದೆಯು ಇದೇ ರೀತಿ ಸಹಕಾರ ನೀಡುವಂತೆ ಮನವಿ ಮಾಡಿದರು.