ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು – ಎಲ್ಲಿ ಶಸ್ತ್ರ ತೆಗೀಬೇಕೋ ಅಲ್ಲಿ ತೆಗೀತೇವೆ – ಶಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ – ಬಿಜೆಪಿ ಪ್ರತಿಭಟನೆಯಲ್ಲಿ ಡಾ.ಭರತ್‌ ಶೆಟ್ಟಿ

ಮಂಗಳೂರು: ಸಂಸತ್‌ ನಲ್ಲಿ ರಾಹುಲ್‌ ಗಾಂಧಿ ನೀಡಿದ ಹೇಳಿಕೆ ವಿರೋಧಿಸಿ ಮಂಗಳೂರಿನಲ್ಲಿ ದ.ಕ ಬಿಜೆಪಿ ಯುವಮೋರ್ಚ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ “ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ” ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು ಅನಿಸ್ತಿದೆ. ಅವನಿಗೆ ಯಾರಾದ್ರೂ ಎರಡು ಕೆನ್ನೆಗೆ ಬಾರಿಸಬೇಕು ಅನಿಸ್ತಾ ಇದೆ. ಆಗ ಇದಕ್ಕೆ ಏಳೆಂಟು ಎಫ್ಐಆರ್‌ ಆಗ್ತಿತ್ತು ಅಷ್ಟೇ. ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ನಿಂತಿದ್ದ. ಈ ಹುಚ್ಚನಿಗೆ ಶಿವ ಮೂರನೇ ಕಣ್ಣು ಬಿಟ್ಟರೆ ಸುಟ್ಟು ಬೂದಿಯಾಗ್ತಾನೆ ಅಂತ ಗೊತ್ತಿಲ್ಲ. ಅವನು ಹಿಂದೂ ವಿರೋಧಿ ನೀತಿಯನ್ನ ಅಳವಡಿಸಿಕೊಂಡಿದ್ದಾನೆ. ನಾವು ಅವನಿಗೆ ಯಾವ ಶಬ್ದ ಪ್ರಯೋಗಿಸಬಹುದು ಅಂತ ನೋಡಿ. ರಾಹುಲ್ ಗಾಂಧಿ ಒಬ್ಬ ದೊಡ್ಡ ಹುಚ್ಚ ಅನ್ನೋದು ಸ್ಪಷ್ಟ. ಹಿಂದೂಗಳ ಬಗ್ಗೆ ಏನು ಮಾತನಾಡಿದ್ರೂ ಕೇಳ್ತಾರೆ ಎಂಬ ಭಾವನೆ ರಾಹುಲ್ ಗಾಂಧಿಗೆ ಇರಬಹುದು. ಅವನು ಅಲ್ಲಿ ಬೊಗಳುವ ಸಂದರ್ಭ ಇಲ್ಲಿನ ಸ್ಥಳೀಯ ನಾಯಕರು ಬಾಲ ಬಿಚ್ಚಲು ಶುರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪೇಜಾವರ ಸ್ವಾಮೀಜಿ ಹೇಳಿಕೆ ಕೊಟ್ಟಿದನ್ನು ವಿರೋಧಿಸಿ ಸ್ಥಳೀಯ ನಾಯಕರು ಹೇಳಿಕೆ ಕೊಟ್ಟಿದ್ದಾರೆ. ಹಿಂದೂ ಧರ್ಮವನ್ನು ಮಠ, ಮಂದಿರವನ್ನು ಕಾಪಾಡೋದು ನಮ್ಮ ಕರ್ತವ್ಯ. ಹಿಂದೂ ಮತ್ತು ಹಿಂದುತ್ವ ಬೇರೆ ಎಂಬ ಥಿಯರಿ ಹೇಳೋದಕ್ಕೆ ಇವರು ಶುರು ಮಾಡಿದ್ದಾರೆ. ಬಾಯಿಗೆ ಬಂದ ಹಾಗೆ ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. 99 ಸೀಟು ಹಿಡಿದುಕೊಂಡು ಏನೋ ಸಾಧನೆ ಮಾಡಿದಾಗೆ ಇವನು ಮಾತನಾಡುತ್ತಿದ್ದಾನೆ. ಶಿವಾಜಿ, ರಾಣಾ ಪ್ರತಾಪ್ ನಮ್ಮ ಸಮಾಜದಲ್ಲೇ ಹುಟ್ಟಿದವರು. ಎಲ್ಲಿ ಶಸ್ತ್ರ ತೆಗೀಬೇಕೋ ಅಲ್ಲಿ ತೆಗೀತೇವೆ. ಶಸ್ತ್ರ ಪೂಜೆ ಮಾಡಿ ಉತ್ತರ ಕೊಡೋದಕ್ಕೂ ನಮಗೆ ಗೊತ್ತಿದೆ. ಪಾರ್ಲಿಮೆಂಟ್ ಗೆ ಹೋಗಿ ಅವನ ಕೆನ್ನೆಗೆ ಕೊಟ್ಟರೆ ಅವನು‌ ಸರಿಯಾಗಬಹುದು. ಅವ ಕೇರಳಕ್ಕೆ ಬಂದಾಗ ಸೆಕ್ಯುಲರ್, ತಮಿಳುನಾಡಿಗೆ ಹೋದಾಗ ನಾಸ್ತಿಕ ಆಗ್ತಾನೆ, ಗುಜರಾತ್ ಭಾಗಕ್ಕೆ ಹೋದಾಗ ಶಿವಭಕ್ತನಾಗುತ್ತಾನೆ. ಅಂತಾ ದೊಡ್ಡ ಹುಚ್ಚ ರಾಹುಲ್ ಗಾಂಧಿ. ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪ್ರತಿಕೃತಿ ದಹಿಸುವ ನಿರ್ಧಾರ ಮಾಡಿದ್ದರು. ಆದ್ರೆ ರಾಹುಲ್ ಗಾಂಧಿ ಪ್ರತಿಕೃತಿ ದಹಿಸಬೇಡಿ ಎಂದು ಪೊಲೀಸರು ಹೇಳಿದ್ದಾರೆ. ಆ ರೀತಿ ಆದ್ರೆ ನಮ್ಮ ವರ್ಗಾವಣೆ ಆಗುತ್ತೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರು ಸಹ ನಮ್ಮ ಜೊತೆ ಪ್ರತಿಭಟನೆಗೆ ಬರಬಹುದು ಎಂದು ಭರತ್‌ ಶೆಟ್ಟಿ ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದಾರೆ.

LEAVE A REPLY

Please enter your comment!
Please enter your name here