ಸಾಫ್ಟ್ ವೇರ್ ಕಂಪನಿಯ ಕ್ಯಾಬ್ ಚಾಲಕರ ಹೊಡೆದಾಟ – ಓರ್ವನಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು

ಮಂಗಳೂರು: ಕಾವೂರು ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದ್ದು, ಕೊಲೆಯತ್ನದ ಪ್ರಕರಣ ದಾಖಲಾಗಿದೆ. ಸಾಫ್ಟ್ ವೇರ್ ಕಂಪನಿಯೊಂದರ ಕ್ಯಾಬ್ ಚಾಲಕರಾಗಿದ್ದವರು ಪರಸ್ಪರ ಹೊಡೆದಾಡಿಕೊಂಡಿದ್ದು ಒರ್ವನಿಗೆ ಚಾಕುನಿಂದ ಇರಿಯಲಾಗಿದೆ.

ಸಂದೀಪ್ ಇರಿತಕ್ಕೊಳಗಾದ ವ್ಯಕ್ತಿ. ಅದೇ ಕಂಪನಿಯಲ್ಲಿ ಚಾಲಕರಾಗಿದ್ದ ತೇಜಸ್ ಶೆಟ್ಟಿ, ಭವಿತ್ ಶೆಟ್ಟಿ, ಪ್ರೀತಂ ಮತ್ತು ಪುನೀತ್ ದೇವಾಡಿಗ ಸೇರಿ ಹಲ್ಲೆ ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ. ತೇಜಸ್ ಮತ್ತು ಸಂದೀಪ್ ಒಂದೇ ಕಂಪನಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದು ಇವರೊಳಗೆ ಹಳೆ ದ್ವೇಷ ಇತ್ತು ಎನ್ನಲಾಗಿದೆ. ಜು.17ರ ಸಂಜೆ ಇವರು ತಮ್ಮ ಶಿಫ್ಟ್ ಮುಗಿಸಿ ಹೊರ ಬಂದಿದ್ದಾಗ, ಹಳೆ ದ್ವೇಷದಲ್ಲಿ ಜಗಳ ಆಗಿದೆ. ತೇಜಸ್ ತನ್ನ ತಮ್ಮ ಮತ್ತಿಬ್ಬರು ಸ್ನೇಹಿತರೊಂದಿಗೆ ಸೇರಿ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದಾರೆ. ಹರಿತ ಆಯುಧದಿಂದ ಸಂದೀಪ್ ತಲೆಗೆ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡಿರುವ ಸಂದೀಪ್‌ ನನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here