ಫಾಸ್ಟ್ಯಾಗ್ ಅಂಟಿಸದ ವಾಹನಗಳಿಂದ ದುಪ್ಪಟ್ಟು ಟೋಲ್‌ ಸಂಗ್ರಹಕ್ಕೆ ಕೇಂದ್ರ ಸರಕಾರ ನಿರ್ಧಾರ

ಮಂಗಳೂರು/ಹೊಸದಿಲ್ಲಿ: ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಒಳಭಾಗದಲ್ಲಿ ಫಾಸ್ಟ್ಯಾಗ್ ಅನ್ನು ಉದ್ದೇಶಪೂರ್ವಕವಾಗಿ ಅಂಟಿಸದೇ ಇರುವವರಿಗೆ ಬಿಸಿ ಮುಟ್ಟಿಸಲು ಇಂತಹ ಬಳಕೆದಾರರಿಂದ ಟೋಲ್‌ ಪ್ಲಾಝಾದಲ್ಲಿ ಎರಡು ಪಟ್ಟು ಅಧಿಕ ಶುಲ್ಕ ಸಂಗ್ರಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ. 

ಈ ರೀತಿ ಉದ್ದೇಶಪೂರ್ವಕವಾಗಿ ಫಾಸ್ಟ್ಯಾಗ್ ಅನ್ನು ವಿಂಡ್‌ಸ್ಕ್ರೀನ್‌ನಲ್ಲಿ ಅಂಟಿಸದೇ ಇರುವವರಿಂದ ಟೋಲ್‌ ಪ್ಲಾಝಾಗಳಲ್ಲಿ ಇತರರಿಗೆ ವಿಳಂಬ ಮತ್ತು ಅನಾನುಕೂಲ ಉಂಟಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿದೆ. ಫಾಸ್ಟ್ಯಾಗ್ ಅಂಟಿಸದೇ ಇರುವವರಿಂದ ಎರಡು ಪಟ್ಟು ಅಧಿಕ ಶುಲ್ಕ ಸಂಗ್ರಹಿಸುವ ಕುರಿತು ಎಸ್‌ಒಪಿಗಳನ್ನೂ ಬಿಡುಗಡೆಗೊಳಿಸಲಾಗಿದೆ. ಈ ಎರಡು ಪಟ್ಟು ಅಧಿಕ ಟೋಲ್‌ ಸಂಗ್ರಹ ಕುರಿತ ಮಾಹಿತಿಯನ್ನು ಎಲ್ಲಾ ಟೋಲ್‌ ಪ್ಲಾಝಾಗಳಲ್ಲೂ ಅಳವಡಿಸಲಾಗುವುದು. ಫಾಸ್ಟ್ಯಾಗ್ ಅಂಟಿಸದ ವಾಹನಗಳ ವಿಆರ್‌ಎನ್‌ ಕಾಣಿಸುವ ರೀತಿಯ ಸಿಸಿಟಿವಿ ದೃಶ್ಯವನ್ನೂ ಟೋಲ್‌ ಪ್ಲಾಝಾಗಳಲ್ಲಿ ಸೆರೆಹಿಡಿಯಲಾಗುವುದು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here