ಮಂಗಳೂರು/ಬಜ್ಪೆ: ಆಧಾರ್ ಕಾರ್ಡ್ ತಿದ್ದುಪಡಿಗೆಂದು ಮನೆಯಿಂದ ಹೊರಟಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜ್ಪೆ ಕಿನ್ನಿಕಂಬಳ ಮೂಡುಪೆರಾರ ನಿವಾಸಿ ಉಸ್ಮಾನ್ ಎಂಬವರ ಪತ್ನಿ ಫಾತಿಮಾ ಝೊಹರಾ(43) ನಾಪತ್ತೆಯಾದ ಮಹಿಳೆ.
ಕಳೆದ ಜೂನ್ 11ರಂದು ಆಧಾರ್ ಕಾರ್ಡ್ ಸರಿಪಡಿಸಿಕೊಂಡು ಬರುವುದಾಗಿ ಮಕ್ಕಳಲ್ಲಿ ಹೇಳಿ ಮನೆಯಿಂದ ಹೋದ ಫಾತಿಮಾ ಝೊಹರಾ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪತಿ ಉಸ್ಮಾನ್ ಬಜ್ಪೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಝೊಹರಾ ಐದು ಅಡಿ ಎತ್ತರ, ಗೋಧಿ ಮೈ ಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ, ತುಳು, ಹಿಂದಿ, ಬ್ಯಾರಿ ಭಾಷೆ ಮಾತನಾಡುತ್ತಾರೆ ಎಂದು ದೂರಿನಲ್ಲಿ ಹೇಳಲಾಗಿದೆ.