ಮಂಗಳೂರು : ಉತ್ತರ ಭಾರತದ ಅಡಿಕೆ ವ್ಯಾಪಾರಿ ಕಂಪೆನಿಗಳು ಮಂಗಳೂರಿನ ಕೆಲವೊಂದು ಅಡಿಕೆ ವ್ಯಾಪಾರಿಗಳಿಗೆ ಕೋಟ್ಯಾಂತರ ರೂ. ವಂಚನೆ ಮಾಡಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರ್ಲೀನ್ ಟ್ರೇಂಡಿಂಗ್ ಕಂಪೆನಿ, ವಿಮಲ್ ಬ್ರದರ್ಸ್ ಹಾಗೂ ಕಮಲೇಶ್ ಪಡಾಲಿಯಾ ಎಂಬ ಕಂಪೆನಿಗಳ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪರ್ಲೀನ್ ಟ್ರೇಡಿಂಗ್ ಕಂಪನಿಯು ಇಲ್ಲಿನ ವರ್ತಕರಿಗೆ ಒಟ್ಟು ₹ 1.34 ಕೋಟಿ ಹಾಗೂ ವಿಮಲ್ ಬ್ರದರ್ಸ್ ಕಂಪನಿಯು ಒಟ್ಟು ₹ 1.21 ಲಕ್ಷ ವಂಚನೆ ನಡೆಸಿದ ಬಗ್ಗೆ ದೂರು ದಾಖಲಾಗಿದೆ.
ಮತ್ತೊಂದು ವಿಮಲ್ ಬ್ರದರ್ಸ್ ಕಂಪನಿಯ ಮಾಲೀಕ ಕಮಲೇಶ್ ಪಡಾಲಿಯಾ ಮತ್ತು ಆತನ ಪತ್ನಿ ರೋಹಿಣಿ ಸೇರಿ ₹ 59.62 ಲಕ್ಷ ವಂಚಿಸಿದ್ದಾರೆ. ಆರೋಪಿಗಳು ತಮ್ಮ ಕಂಪನಿಯನ್ನು ಮುಚ್ಚಿ ಅದರಲ್ಲಿದ್ದ 115 ಚೀಲ ಅಡಿಕೆಯನ್ನು ಸಂಬಂಧಿಕರ ಗೋದಾಮಿಗೆ ಸ್ಥಳಾಂತರಿಸಿದ್ದಾರೆ. ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಆಗಿರುವ ಪ್ರತಿಕ್ರಿಯೆ ಬರುತ್ತಿದೆ’ ಎಂದು ಹಬೀಬ್ ರಹಿಮಾನ್ ಕೆ. ಅವರು ದೂರಿನಲ್ಲಿ ತಿಳಿಸಿದ್ದಾರೆ.
ವಿಮಲ್ ಬ್ರದರ್ಸ್ ಕಂಪನಿಯು ಒಟ್ಟು ₹ 25.25 ಲಕ್ಷ ವಂಚಿಸಿದೆ ಎಂದು ಎಸ್.ಆರ್.ಟ್ರೇಡಿಂಗ್ ಕಂಪನಿಯ ಪಾಲುದಾರರಾದ ಶ್ರೀಪತಿ ಮತ್ತು ಕೆ.ಎಸ್.ನಾರಾಯಣ ಭಟ್ ಆರೋಪಿಸಿದ್ದಾರೆ. ಅಲ್ಲದೆ ₹ 36.39 ಲಕ್ಷ ವಂಚಿಸಿದೆ ಎಂದು ಎ.ಎ.ಸುಪಾರಿ ಟ್ರೇಡಿಂಗ್ ಕಂಪನಿಯ ಅಬ್ದುಲ್ ರಹಿಮಾನ್ ದೂರು ನೀಡಿದ್ದಾರೆ. ಗುಜರಾತಿನ ವರ್ತಕ ಕಮಲೇಶ್ ಪಡಾಲಿಯಾ ₹8.99 ಲಕ್ಷ ಹಣವನ್ನು ನೀಡದೇ ವಂಚಿಸಿದ ಬಗ್ಗೆ ಬೀಬಿ ಅಲಾಬಿ ರಸ್ತೆಯ ಒಣ ಅಡಿಕೆ ವ್ಯಾಪಾರಿ ಯೂಸುಫ್ ವಾರದ ಹಿಂದೆ ದೂರು ನೀಡಿದ್ದರು.ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.