ಮಂಗಳೂರು: ಲಕ್ಷಾಂತರ ರೂಪಾಯಿ ಬೆಲೆಬಾಳುವ 25 ಕೆ.ಜಿ. ತೂಕದ 50 ಪೊಲಿಪ್ರೊಪೆಲಿನ್ ಬ್ಯಾಗ್‌ಗಳು ತಣ್ಣೀರುಬಾವಿ ಬೀಚ್‌ನಲ್ಲಿ ಪತ್ತೆಯಾಗಿದೆ.ಪತ್ತೆಯಾಗಿರುವ 50 ಪೊಲಿಪ್ರೊಪೆಲಿನ್ ಬ್ಯಾಗ್‌ಗಳು ತಲಾ 25 ಕೆ.ಜಿ. ತೂಗುತ್ತಿವೆ.
ಜು.23ರಂದು ಮುಂಜಾನೆ ಸಮುದ್ರ ತೀರದಲ್ಲಿ ಈ ಬ್ಯಾಗ್ ಪತ್ತೆಯಾಗಿರುವ ಬಗ್ಗೆ ಬೀಚ್ ನಿರ್ವಹಣೆ ಮಾಡುವ ಪದ್ಮನಾಭ್ ಪಣಿಕ್ಕರ್ ಅವರು ಪಣಂಬೂರು ಪೊಲೀಸರಿಗೆ ತಿಳಿಸಿದ್ದಾರೆ. ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ರಿಲಾಯನ್ಸ್ ಸಂಸ್ಥೆಗೆ ಸೇರಿದ ಕಚ್ಚಾ ಸರಕು ಎಂದು ತಿಳಿದುಬಂದಿದೆ.
ಪೆಟ್ರೋಕೆಮಿಕಲ್ಸ್ ಉತ್ಪನ್ನವಾಗಿರುವ ಪೊಲಿಪ್ರೊಪೆಲಿನ್ ಪ್ಲಾಸ್ಟಿಕ್, ಔಷಧ ಸಹಿತ ವಿವಿಧ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತದೆ.