ಮಂಗಳೂರು: ಕರ್ನಾಟಕ ಅಲೈಡ್ ಆಂಡ್ ಹೆಲ್ತ್ ಕೇರ್ ಪ್ರೋಫೆಶನ್ಸ್ ಕೌನ್ಸಿಲ್ ನೂತನ ಅಧ್ಯಕ್ಷರಾದ ಪ್ರೊ.ಡಾ. ಇಫ್ತಿಕರ್ ಆಲಿ ಅಹ್ಮದ್ ಅವರಿಗೆ ನಗರದ ಡಾ.ಎ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಎ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಡಾ. ರಂಜಿತ್ ಶೆಟ್ಟಿ ಅವರು, ಕಠಿಣ ಪರಿಶ್ರಮಿಯಾಗಿರುವ ಡಾ.ಇಫ್ತಿಕರ್ ಆಲಿ ಕರ್ನಾಟಕ ಅಲೈಡ್ ಆಂಡ್ ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಸನ್ಮಾನ ಸ್ವೀಕಾರಿಸಿ ಮಾತನಾಡಿದ ಪ್ರೊ.ಡಾ. ಇಫ್ತಿಕರ್ ಆಲಿ ಅಹ್ಮದ್ ಅಲೈಡ್ ವೈದ್ಯಕೀಯ ವಿಭಾಗಗಳಿಗೆ ಕೌನ್ಸಿಲ್ ಆರಂಭಿಸುವ ಮೂಲಕ ಸರ್ಕಾರ ಮಹತ್ವ ಕಾರ್ಯ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಪ್ರೊ.ಡಾ. ಹಿಮಾ ಊರ್ಮಿಳಾ ಶೆಟ್ಟಿ ವಹಿಸಿ ಮಾತನಾಡಿ ಪ್ರೊ.ಡಾ. ಇಫ್ತಿಕರ್ ಆಲಿ ಅಹ್ಮದ್ ಮೌಲಿಕ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಕೊಡುಗೆಯನ್ನು ನೀಡಿದ್ದು, ಅವರ ಕಾರ್ಯ ಮಹತ್ತರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಲ್ಲೈಡ್ ಹೆಲ್ತ್‌ಸೈನ್ಸ್‌ನ ಪ್ರಾಂಶುಪಾಲ ಪ್ರೊ. ಶ್ರೀಪ್ರಿಯಾ.ಎಚ್ ಸ್ವಾಗತಿಸಿ,ಸಹಾಯಕ ಪ್ರಾಧ್ಯಾಪಕ ದಿವ್ಯಾ ವಂದಿಸಿ,. ಸಹಾಯಕ ಪ್ರಾಧ್ಯಾಪಕಿ ಪ್ರಿಯಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಡಾ. ದಿವ್ಯಾಂಜಲಿ ಶೆಟ್ಟಿ ಉಪಸ್ಥಿತರಿದ್ದರು.