ತುಂಬಿ ಹರಿಯುತ್ತಿರುವ ಫಾಲ್ಗುಣಿ-ತಗ್ಗು ಪ್ರದೇಶಗಳಿಗೆ ನೀರು-ವಾಮಂಜೂರು ಉಳಾಯಿಬೆಟ್ಟು ರಸ್ತೆ ಸಂಪರ್ಕ ಕಡಿತ

ಮಂಗಳೂರು: ಮಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನಗರದ ನದಿಗಳು ಉಕ್ಕಿ ಹರಿಯುತ್ತಿವೆ.ಇಂದು ನಗರದ ಹೊರವಲಯದ ಫಾಲ್ಗುಣಿ ನದಿ ಹರಿ ನೀರಿನ ಮಟ್ಟ ಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ವಾಮಂಜೂರು ರಾಷ್ಟ್ರೀಯ ಹೆದ್ದಾರಿಯಾಗಿ ಉಳಾಯಿಬೆಟ್ಟು ಸಂಪರ್ಕಿಸುವ ಪರಾರಿ ರಸ್ತೆಯಲ್ಲಿ ನದಿ ನೀರು ಹರಿದು ಬಂದಿದೆ. ಇದರಿಂದ ವಾಮಂಜೂರು ಉಳಾಯಿಬೆಟ್ಟು ರಸ್ತೆ ಸಂಪರ್ಕ ಕಡಿತಗೊಂಡಿದೆ.ವಾಹನ ಸವಾರರು ಸ್ಥಳೀಯ ಕೆತ್ತಿಕಲ್ ನೀರುಮಾರ್ಗ ಪಡು ಮೂಲಕ ಸಂಚರಿಸುವಂತೆ ಇಲಾಖೆ ಸೂಚನೆ ನೀಡಿದೆ.ಪರಾರಿ ಮುಖ್ಯದ್ವಾರದ ರಸ್ತೆ ಬ್ಯಾರಿಕೇಡ್ ಇಟ್ಟು ಸಂಪೂರ್ಣ ಮುಚ್ಚಲಾಗಿದೆ.

LEAVE A REPLY

Please enter your comment!
Please enter your name here