ಕಡಲ್ಕೊರೆತದಿಂದ ಮಂಗಳೂರು, ಉಡುಪಿಗೆ ಗಂಡಾಂತರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಕರಾವಳಿ ತೀರಗಳಲ್ಲಿ ಕಡಲ್ಕೊರೆತ ಸಮಸ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಆದರೆ, ಇತ್ತೀಚೆಗೆ ಆತಂಕಕಾರಿ ಅಧ್ಯಯನ ವರದಿಯೊಂದು ಪ್ರಕಟಗೊಂಡಿದ್ದು, 2040ರ ವೇಳೆಗೆ ಉಭಯ ನಗರಗಳ ಶೇ 5ರಷ್ಟು ಭೂಮಿ ಸಮುದ್ರ ಪಾಲಾಗಲಿದೆ ಎಂಬುದು ತಿಳಿದುಬಂದಿದೆ. ಬೆಂಗಳೂರು ಮೂಲದ ಥಿಂಕ್​ಟ್ಯಾಂಕ್  ‘ಸೆಂಟರ್ ಫಾರ್ ಸ್ಟಡಿ ಆಫ್​​ ಸೈನ್ಸಸ್’ ವರದಿ ಪ್ರಕಟಿಸಿದ್ದು, ಮಂಗಳೂರಿನಲ್ಲಿ ಸಮುದ್ರ ಮಟ್ಟದಲ್ಲಿ 75.1 ಸೆಂಟಿ ಮೀಟರ್ ಹಾಗೂ ಉಡುಪಿಯಲ್ಲಿ ಸಮುದ್ರ ಮಟ್ಟದಲ್ಲಿ 75.2 ಸೆಂಟಿ ಮೀಟರ್ ಏರಿಕೆಯಾಗಲಿದೆ ಎಂದಿದೆ.

ಉಡುಪಿ, ಮಂಗಳೂರು ಮಾತ್ರವಲ್ಲದೆ ಕೊಚ್ಚಿ, ವಿಶಾಖಪಟ್ಟಣಂ ಮತ್ತು ಪುರಿಯಲ್ಲಿ ಶೇಕಡಾ 5 ರಷ್ಟು ಭೂಮಿಯನ್ನು ಸಮುದ್ರ ಆಪೋಶನ ತೆಗೆದುಕೊಳ್ಳಲಿದೆ ಎಂದು ವರದಿ ಉಲ್ಲೇಖಿಸಿದೆ.

ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಇತ್ಯಾದಿ ಕಾರಣಗಳಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಭಾರತದ 15 ನಗರಗಳು ಅಪಾಯ ಎದುರಿಸುತ್ತಿವೆ ಎಂದು ‘ಸೆಂಟರ್ ಫಾರ್ ಸ್ಟಡಿ ಆಫ್​​ ಸೈನ್ಸಸ್’ ಅಧ್ಯಯನ ವರದಿ ತಿಳಿಸಿದೆ. ಚೆನ್ನೈ, ಮುಂಬೈ, ತಿರುವನಂತಪುರಂ, ಕೊಚ್ಚಿ, ಮಂಗಳೂರು, ವಿಶಾಖಪಟ್ಟಣಂ, ಕೋಯಿಕ್ಕೋಡ್, ಹಲ್ದಿಯಾ, ಕನ್ಯಾಕುಮಾರಿ, ಪಣಜಿ, ಪುರಿ, ಉಡುಪಿ, ಪರದೀಪ್, ತೂತುಕುಡಿ ಮತ್ತು ಪದುಚೇರಿಯ ಯಾಣಂ ಅಪಾಯ ಎದುರಿಸುತ್ತಿವೆ ಎಂದು ‘ಸೀ ಲೆವೆಲ್ ರೈಸ್ ಸಿನಾರಿಯೋಸ್ ಆ್ಯಂಡ್ ಇಂಡ್ಯೂಷನ್ ಮ್ಯಾಪ್ಸ್ ಫಾರ್ ಸೆಲೆಕ್ಟೆಡ್ ಇಂಡಿಯನ್ ಸಿಟೀಸ್’ ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

LEAVE A REPLY

Please enter your comment!
Please enter your name here