ಮಂಗಳೂರು:2024-25ನೇ ಸಾಲಿನಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪ್ರಸ್ತಕ ಸಾಲಿನಲ್ಲಿ ತರಬೇತಿ ಪೂರೈಸಿದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ “ಬಿ.ಎ ಸಂಗಮ” ಕಾರ್ಯಕ್ರಮ ಬಿ.ಎ ಐಟಿಐ ತುಂಬೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಮಂಗಳೂರಿನ ಡಾ. ಎಂ.ವಿ. ಶೆಟ್ಟಿ ಫಿಸಿಯೋತೆರಪಿ ಆಂಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಮತ್ತು,ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಆಂಡ್ ಹೆಲ್ತ್ ಕೇರ್ ಪ್ರೊಫೇಷಿಯನ್ಸ್ ಕರ್ನಾಟಕ ಯು.ಟಿ ಇಫ್ತಿಕಾರ್ ಫರೀದ್ ಭಾಗವಹಿಸಿದ್ದರು.ಈ ವೇಳೆ ಮಾತನಾಡಿದ ಅವರು ಬಡ ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಬಿ.ಎ ಐಟಿಐ ಆದರ್ಶಪ್ರಾಯವಾಗಿದೆ. ಸೇರ್ಪಡೆಗೊಂಡ ವಿದ್ಯಾರ್ಥಿಗಳು ಭಾಗ್ಯಶಾಲಿಗಳು ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಎಸ್.ಆರ್.ಟಿ.ಸಿ, ಬಿ.ಸಿ.ರೋಡು ಘಟಕದ ವ್ಯವಸ್ಥಾಪಕ ಇಸ್ಮಾಯಿಲ್ ಮಾತನಾಡಿ ಭಾವನಾತ್ಮಕವಾಗಿ ಸಂಸ್ಕಾರದೊಂದಿಗೆ ತಾಂತ್ರಿಕ ತರಬೇತಿ ನೀಡುವ ಬಿ.ಎ ಐಟಿಐ ತುಂಬೆ ಶ್ಲಾಘನೀಯ ಸೇವೆಯನ್ನು ಸಲ್ಲಿಸುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಕೌಶಲ್ಯ ಅಧಿಕಾರಿ ಪ್ರದೀಪ್ ಡಿಸೋಜ,ಮಂಗಳೂರಿನ ವಿನಾಯಕ ಇಂಡಸ್ಟ್ರೀಸ್ ಮಾಲಕ ಸುಧಾಕರ ಬಾಳಿಗ, ಎನ್.ಡಿ ಸನ್ಸ್ ಸಂಸ್ಥೆಯ ಮಾಲೀಕ ಎಮ್.ಡಿ ಪೂಜಾರಿ ಹಾಗೂ ಕೋನ್-ಏರ್ ಇಂಜಿನಿಯರಿಂಗ್ಸ್ ಸೋಲ್ಯೂಶನ್ಸ್ ಇದರ ಮಾನವ ಸಂಪನ್ಮೂಲ ಅಧಿಕಾರಿ ವಿಜಯ ಆನಂದ ರಾವ್ ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯ ವಿ.ಎಸ್ ಭಟ್, ನಿಸಾರ್ ಅಹಮದ್ ವಳವೂರು ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ನೂತನ ವಿದ್ಯಾರ್ಥಿಳಿಗೆ ಪ್ರಮಾಣ ವಚನದ ಭೋದಿಸುವುದರ ಮೂಲಕ ಬರಮಾಡಿಕೊಳ್ಳಲಾಯಿತು. ಹಿರಿಯ ವಿದ್ಯಾರ್ಥಿಗಳೆಲ್ಲರಿಗೂ ಉದ್ಯೋಗ ದೊರಕಿದ್ದು ಸಂತಸದಿಂದ ಬೀಳ್ಕೊಡಲಾಯಿತು. ಪ್ರಾಚಾರ್ಯ ನವೀನ್ ಕುಮಾರ್ ಕೆ.ಎಸ್. ಪ್ರಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಗಾಯತ್ರಿ ವಂದಿಸಿದರು. ರಾಜೇಶ್ ಟಿ. ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ವತಿಯಿಂದ ಡಾ. ಯು.ಟಿ ಇಫ್ತಿಕಾರ್ ಫರೀದ್ ಅವರನ್ನು ಸನ್ಮಾನಿಸಲಾಯಿತು.