ಮಂಗಳೂರು : ಇಂದು ಮಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹೈಡ್ರಾಮಾ ನಡೆದಿದೆ. ಬೀದಿ ಬದಿ ವ್ಯಾಪಾರಿಗಳ ಅಂಗಡಿ ತೆರವು ಕಾರ್ಯಾಚರಣೆ ವಿರುದ್ಧ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಮಂಗಳೂರಿನ ಮನಪಾ ಕಛೇರಿ ಮುಂದೆ ನಡೆಯುತ್ತಿದ್ದ ಪ್ರತಿಭಟನೆಗೆ ಎಸ್‌ಡಿಪಿಐ ಕಾರ್ಮಿಕ ಸಂಘಟನೆ ಎಸ್‌ಡಿಟಿಯು ಕಾರ್ಯಕರ್ತರು ಆಗಮಿಸಿದ್ದು, ಪ್ರತಿಭಟನಾಕಾರರಿಂದ ವಿರೋಧ ವ್ಯಕ್ತವಾಗಿದೆ.
ಧ್ವಜ ಹಿಡಿದು ಆಗಮಿಸಿದ್ದ ಎಸ್‌ಡಿಟಿಯು ಕಾರ್ಯಕರ್ತರ ವಿರುದ್ಧ ಕೋಮುವಾದಿಗಳೇ ಹೊರ ಹೋಗಿ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಎಸ್‌ಡಿಟಿಯು ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರ ಮಧ್ಯ ಪ್ರವೇಶಿಸಿ ಎಸ್‌ಡಿಟಿಯು ಕಾರ್ಯಕರ್ತರನ್ನ ಸ್ಧಳದಿಂದ ಚದುರಿಸಿದ್ದಾರೆ.