ಸಕಲೇಶಪುರ- ಬಾಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತ ಹಿನ್ನಲೆ – 10 ರೈಲು ಸಂಚಾರ ರದ್ದು

ಮಂಗಳೂರು: ಸಕಲೇಶಪುರ- ಬಾಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತದಿಂದ ಮಣ್ಣು ಬಿದ್ದ ಪರಿಣಾಮ ಕೆಲವು ರೈಲು ಸಂಚಾರಗಳನ್ನು ರದ್ದುಗೊಳಿಸಲಾಗಿದೆ. ಈ ಕುರಿತು ದಕ್ಷಿಣ ಪಶ್ಚಿಮ ರೈಲ್ವೆಯ ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಾಡಿ ರದ್ದುಗೊಂಡ ರೈಲುಗಳ ಮಾಹಿತಿ ನೀಡಿದ್ದಾರೆ.

ರದ್ದಾದ ರೈಲುಗಳು

1. ಟ್ರೈನ್ ನಂ. 16595 ಕೆಎಸ್‌ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್, 12.08.2024 ಮತ್ತು 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

2. ಟ್ರೈನ್ ನಂ. 16596 ಕಾರವಾರ–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

3. ಟ್ರೈನ್ ನಂ. 16585 ಎಸ್‌ಎಮ್‌ವಿಟಿ ಬೆಂಗಳೂರು – ಮುರ್ಡೇಶ್ವರ ಎಕ್ಸ್‌ಪ್ರೆಸ್, 12.08.2024 ಮತ್ತು 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

4. ಟ್ರೈನ್ ನಂ. 16586 ಮುರ್ಡೇಶ್ವರ – ಎಸ್‌ಎಮ್‌ವಿಟಿ ಬೆಂಗಳೂರು ಎಕ್ಸ್‌ಪ್ರೆಸ್, 12.08.2024 ಮತ್ತು 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

5. ಟ್ರೈನ್ ನಂ. 07377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ವಿಶೇಷ, 12.08.2024 ಮತ್ತು 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

6. ಟ್ರೈನ್ ನಂ. 07378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ, 13.08.2024 ಮತ್ತು 14.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

7. ಟ್ರೈನ್ ನಂ. 16516 ಕಾರವಾರ- ಯಶವಂತಪುರ ಎಕ್ಸ್‌ಪ್ರೆಸ್, 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

8. ಟ್ರೈನ್ ನಂ. 16575 ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್, 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

9. ಟ್ರೈನ್ ನಂ. 16512 ಕಣ್ಣೂರು– ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್, 12.08.2024 ಮತ್ತು 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

10. ಟ್ರೈನ್ ನಂ. 16511 ಕೆಎಸ್‌ಆರ್ ಬೆಂಗಳೂರು – ಕಣ್ಣೂರು ಎಕ್ಸ್‌ಪ್ರೆಸ್, 12.08.2024 ಮತ್ತು 13.08.2024 ರಂದು ಪ್ರಯಾಣ ಆರಂಭವಾಗುವ ರೈಲು ರದ್ದಾಗಿದೆ.

LEAVE A REPLY

Please enter your comment!
Please enter your name here