ವಿಟ್ಲ ಪೊಲೀಸರ ಕಾರ್ಯಾಚರಣೆ -‌ ಪಂಪ್ ಕಳವು ಪ್ರಕರಣದ ಆರೋಪಿ ಕಡಬ ಮೂಲದ ಶಾಕಿರ್ ಬಂಧನ

ವಿಟ್ಲ : ರಿಪೇರಿಗೆಂದು ತಂದಿರಿಸಿದ್ದ ಬೋರ್‌ ವೆಲ್‌ ಪಂಪ್‌ ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದು, ಕಡಬ ತಾಲೂಕಿನ ಪೆರಬೆಯ ಕೋಚಕಟ್ಟೆ ನಿವಾಸಿ ಮಹಮ್ಮದ್ ಶಾಕೀರ್ ಬಂಧಿತ ಆರೋಪಿಯಾಗಿದ್ದಾನೆ.

2024 ಜುಲೈ 21ರಿಂದ 22ರ ಮಧ್ಯದ ಅವಧಿಯಲ್ಲಿ ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್‌ ಗೌಡ ಎಂಬವರ ಮನೆಯ ಬಳಿಯಿರುವ ಕಟ್ಟಡದಲ್ಲಿ ಸಾರ್ವಜನಿಕರಿಂದ ರಿಪೇರಿಗಾಗಿ ಪಡೆದು ಇರಿಸಿದ್ದ ಅಂದಾಜು 1,81,000/- ರೂ. ಮೌಲ್ಯದ ಒಟ್ಟು 16 ಬೊರ್‌ವೆಲ್‌ ಪಂಪುಗಳನ್ನು ಕಳ್ಳರು ಕಳ್ಳತನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ.119/2024 ಕಲಂ:303(2) ಭಾರತೀಯ ನ್ಯಾಯ ಸಂಹಿತೆ 2023 ರಂತೆ ಪ್ರಕರಣ ದಾಖಲಾಗಿದ್ದು, ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.14ರಂದು ಆರೋಪಿಯನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ರೂ 1,81,000/–ರೂ ಮೌಲ್ಯದ 16 ಬೊರವೆಲ್‌ ಪಂಪ್ ಗಳು ಹಾಗೂ ಕಳ್ಳತನಕ್ಕೆ ಉಪಯೋಗಿಸಿದ, ಅಂದಾಜು 2,00,000/- ರೂ. ಮೌಲ್ಯದ  ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸ್ವಾದೀನಪಡಿಸಿಕೊಂಡು ಸೊತ್ತುಗಳ ಒಟ್ಟು ಮೌಲ್ಯ- 3,81,000/- ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಎಸ್.‌ ವಿಜಯ ಪ್ರಸಾದ್‌ ಮಾರ್ಗದರ್ಶನದಂತೆ ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ನಾಗರಾಜ್‌ ಹೆಚ್‌ ಈ ನಿರ್ದೇಶನದಂತೆ, ಪೊಲೀಸ್‌ ಉಪ ನಿರೀಕ್ಷಕರಾದ ರತ್ನಕುಮಾರ್‌ ಎಂ ನೇತೃತ್ವದಲ್ಲಿ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ ಕರುಣಾಕರ,ಶ್ರೀಧರ್‌ ಸಿ ಎಸ್‌, ಶಂಕರ ಸಂಶಿ, ಗದಿಗಪ್ಪ, ಮನೋಜ್‌, ಗಣಕಯಂತ್ರ ವಿಭಾಗದ ಸಂಪತ್‌, ದಿವಾಕರ್‌ ಭಾಗವಹಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳು ಪರಾರಿಯಾಗಿರುತ್ತಾರೆ.

LEAVE A REPLY

Please enter your comment!
Please enter your name here