ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಹೊನಲು ಬೆಳಕಿನ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪಂದ್ಯಾಟವು 8 ತಂಡಗಳ ಲೀಗ್ ಮಾದರಿಯಲ್ಲಿ ನಡೆದಿದ್ದು, ವಸಂತ ರೈ ಕಾರ್ಕಳ ಮಾಲಕತ್ವದ ನೆಟ್ ನಿಂಜಾಸ್ ಪ್ರಥಮ ಸ್ಥಾನ ಪಡೆದುಕೊಂಡರೆ, ದೀಕ್ಷಿತ್ ಬಂಡಾಜೆ ಮಾಲಕತ್ವದ ಸ್ಮ್ಯಾಶ್ ಮಾಸ್ಟರ್ಸ್ ದ್ವಿತೀಯ ಸ್ಥಾನ ಪಡೆದುಕೊಂಡಿತು.
ನಾಗೇಶ್ ರೈ ಮಾಳ ಮಾಲಕತ್ವದ ಶಟಲ್ ಸ್ಟ್ರೈಕರ್ ತೃತೀಯ ಸ್ಥಾನ ಪಡೆದುಕೊಂಡು, ಗಿರಿಶಂಕರ ಸುಲಾಯ ಮಾಲಕತ್ವದ ಶಟಲ್ ಸ್ಟಾರ್ಸ್ ಚತುರ್ಥ ಸ್ಥಾನ ಪಡೆದುಕೊಂಡರು. ತಂಡದ ಮಾಲಕರಾಗಿ ನಾಗೇಶ್ ರೈ ಮಾಳ, ವಸಂತ ರೈ ಕಾರ್ಕಳ, ಸುಜಿತ್ ರೈ ಪಟ್ಟೆ, ಹರಿಪ್ರಸಾದ್ ರೈ ಶೇಣಿ, ಗಿರಿಶಂಕರ ಸುಲಾಯ, ಧನಂಜಯ ಕೇನಾಜೆ, ಜೀತಾಕ್ಷ ಬರೆಪ್ಪಾಡಿ,ದೀಕ್ಷಿತ್ ಬಂಡಾಜೆ ಸಹಕರಿಸಿದರು.