ಪುತ್ತೂರು: ಜ.30 ರಿಂದ ಫೆ.2 ರ ತನಕ ಕೇರಳ ಕಣ್ಣೂರು ಚಪ್ಪಾರಪಡವು ನಲ್ಲಿ ನಡೆಯಲಿರುವ ಜಾಮಿಅಃ ಇರ್ಫಾನಿಯ್ಯ ಅರೆಬಿಕ್ ಕಾಲೇಜು ಇದರ 33ನೇ ವಾರ್ಷಿಕ ಹಾಗು 22ನೇ ಸನದುದಾನ ಮಹಾ ಸಮ್ಮೇಳನದ ಪ್ರಚಾರಾರ್ಥವಾಗಿ ವಿಟ್ಲ ಕುದ್ದುಪದವು ಕೆದಿಲ ಕಾಂಪ್ಲೆಕ್ಸ್ ನಲ್ಲಿ ಡಿ.3 ರಂದು ಉದ್ಘಾಟನಾ ಸಮ್ಮೇಳನ ಮತ್ತು ಬುರ್ದಾ, ಖವಾಲಿ ಸ್ಪರ್ಧೆ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಜಂಯಿತ್ತುಲ್ ಇರ್ಫಾನಿಯ್ಯಃ ಸಂಸ್ಥೆಯ ಅಧ್ಯಕ್ಷ ಶೇಖ್ ಮಹಮ್ಮದ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಸಮ್ಮೇಳನದಲ್ಲಿ ಬಾಯಾರಿನ ಅಲ್ ಹಾಜ್ ಉಸ್ತಾದ್ ಅಬ್ದುಲ್ ರಝ್ಝಾಕ್ ದುಆಃ ನೆರವೇರಿಸಲಿದ್ದಾರೆ. ಕೂರ್ನಡ್ಕ ಖಾಝಿ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉದ್ಘಾಟಿಸಲಿದ್ದು, ಪ್ರಮುಖ ಭಾಷಣವನ್ನು ಪ್ರೊಫೆಸರ್ ಸಯ್ಯದ್ ಶರೀಫ್ ತಂಙಳ್ ಇರ್ಫಾನಿ ನಡೆಸಲಿದ್ದಾರೆ.
ಅಧ್ಯಕ್ಷತೆಯನ್ನು ಕೇಂದ್ರ ಜಂಇಯ್ಯತ್ತುಲ್ ಇರ್ಫಾನಿಯ್ಯೀನ್ ಅಧ್ಯಕ್ಷ ನಸ್ವೀರ್ ಫೈಝಿ ಇರ್ಫಾನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯಿಂದ 30 ತಂಡ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಸದಸ್ಯರಾದ ತ್ವಾಹಾ ಫೈಜಿ ಇರ್ಫಾನಿ, ಯೂಸುಫ್ ಹೈದರ್ ಇರ್ಫಾನಿ, ಮಹಮ್ಮದ್ ಆಸಿಫ್ ಉಪಸ್ಥಿತರಿದ್ದರು.