ನಾಸಾ-ಇಸ್ರೋ ಜಂಟಿ ನಿರ್ಮಾಣದ ನಿಸಾರ್‌ ಉಪಗ್ರಹ ಬೆಂಗಳೂರಿಗೆ

ಬೆಂಗಳೂರು: ಭಾರತ ಮತ್ತು ಅಮೇರಿಕಾ ಜಂಟಿಯಾಗಿ ನಿರ್ಮಿಸಿದ ಉಪಗ್ರಹವನ್ನು ಬೆಂಗಳೂರಿಗೆ ತರಲಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎನ್ನಲಾದ ಇಸ್ರೋ ಮತ್ತು ನಾಸಾ ಅಭಿವೃದ್ದಿ ಪಡಿಸಿರುವ ಉಪಗ್ರಹ ಇದಾಗಿದ್ದು ಮಾ.8ರಂದು ಅಮೇರಿಕಾ ವಾಯು ಪಡೆಯ ಅತ್ಯಂತ ದೊಡ್ಡ ವಿಮಾನ ಸಿ17 ರಲ್ಲಿ ಭಾರತಕ್ಕೆ ತರಲಾಗಿದೆ.

ನಾಸಾ-ಇಸ್ರೋ ಸಿಂಥೆಟಿಕ್‌ ಅಪಾರ್ಚರ್‌ ರಾಡಾರ್‌(ನಿಸಾರ್) ಉಪಗ್ರಹವನ್ನು ಅಮೇರಿಕಾದ ಕ್ಯಾಲಫೋರ್ನಿಯಾದಿಂದ ಬೆಂಗಳೂರಿಗೆ ತರಲಾಗಿದ್ದು ಈ ಉಪಗ್ರಹ ವಾತಾವರಣದಲ್ಲಿನ ಬದಲಾವಣೆ ಪರಿಸರ ಸೂಕ್ಷ್ಮ ವಿಷಯಗಳಾದ ಜ್ವಾಲಾಮುಖಿ ಸ್ಪೋಟ, ಸಾಗರದ ಅಲೆಗಳ ಎತ್ತರ ಹೆಚ್ಚಳ, ಭೂಕಂಪದ ಮುನ್ಸೂಚನೆ, ತಾಪಮಾನ ಏರಿಕೆ ಸೇರಿದಂತೆ ಇನ್ನಿತರ ವಿಷಯಗಳ ಅಧ್ಯಯನ ನಡೆಸಲಿದೆ.

 ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here