ಮಂಗಳೂರು: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಚರ್ಚ್ ಸಮೀಪದಲ್ಲಿರುವ ಕ್ಯಾಂಡಲ್ ತಯಾರಿಕ ಘಟಕವೊಂದು ಅಗ್ನಿಗಾಹುತಿಯಾಗಿದ್ದು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಮಾರ್ಚ್ 22ರ ಮಧ್ಯಾಹ್ನ ನಡೆದಿದೆ. ಮಾಹಿತಿ ತಿಳಿದೊಡನೆ ಅಗ್ನಿಶಾಮಕ ದಳದ ಎರಡು ವಾಹನ ಸ್ಥಳಕ್ಕೆ ಬಂದಿದ್ದು ಸತತ ಮೂರು ಘಂಟೆಗಳ ಕಾರ್ಯಾಚಾರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಇನ್ನೊಂದೆಡೆ, ರಾಷ್ಟ್ರೀಯ ಹೆದ್ದಾರಿ ತೊಕ್ಕೊಟ್ಟಿನ ಕಲ್ಲಾಪು ನಲ್ಲಿ ಕಿಯಾoಜಾ ಯೂನಿವರ್ಸಲ್ ವಾಣಿಜ್ಯ ಸಂಕೀರ್ಣದಲ್ಲಿರುವ ಮನ್ಹಾ ಮಂದಿ ಹೋಟೆಲ್ ನ ಚಿಮಿಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಸಿಬ್ಬಂದಿ ಮತ್ತು ಸ್ಥಳೀಯರ ಬೆಂಕಿ ನಂದಿಸುವ ಪ್ರಯತ್ನ ವಿಫಲವಾಗಿದ್ದು ಬೆಂಕಿ ಮತ್ತಷ್ಟು ವ್ಯಾಪಿಸಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐದು ಮಹಡಿಯ ಈ ಕಟ್ಟಡದಲ್ಲಿ ಅಗತ್ಯ ಸುರಕ್ಷತಾ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋಗಾಗಿ ಕ್ಲಿಕ್ ಮಾಡಿ