ವಿದ್ಯಾರ್ಥಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ- ದೂರು ದಾಖಲು

ಮಂಗಳೂರು : ಮಂಗಳೂರು ನಗರದಲ್ಲಿ ಫುಟ್ಬಾಲ್ ಆಟದ ವಿಷಯವಾಗಿ ವಿವಾದ ಏರ್ಪಟ್ಟು ವಿದ್ಯಾರ್ಥಿಗಳ ಗುಂಪು ಮತ್ತೊಂದು ತಂಡದ ವಿದ್ಯಾರ್ಥಿಗಳನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆ.19ರಂದು ಸಂಜೆ ನಡೆದಿದೆ. ಈ ಸಬಂಧ 9 ಜನರ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆಹರೂ ಮೈದಾನಿನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 14ರಂದು ಆಯೋಜಿಸಿದ್ದ ಫುಟ್ಬಾಲ್ ಪಂದ್ಯಾಟ ವೇಳೆ ವಿದ್ಯಾರ್ಥಿ ಗುಂಪುಗಳ ಮಧ್ಯೆ ಉಂಟಾದ ಮತಭೇದ ಹಲ್ಲೆಗೆ ಕಾರಣ ಎಂದು ತಿಳಿದುಬಂದಿದೆ. ಸಂತ ಅಲೋಸಿಯಸ್ ಕಾಲೇಜು ಮತ್ತು ಯೆನಪೋಯಾ ಕಾಲೇಜಿನ ವಿದ್ಯಾರ್ಥಿಗಳ ಫುಟ್ಬಾಲ್ ಆಟದ ವೇಳೆ ಮೊಹಮ್ಮದ್ ಮತ್ತು ಆತನ ಸ್ನೇಹಿತರಾದ ಮೊಹಮ್ಮದ್ ಅಫ್ರಾನ್, ಇಬ್ರಾಹಿಂ ಖಲೀಲ್, ಪಾರಿಸ್ ಮತ್ತು ಮೊಹಮ್ಮದ್ ಜುನೈದ್ ಯೇನೆಪೋಯಾ  ತಂಡವನ್ನು ಬೆಂಬಲಿಸಿದ್ದಾರೆ ಎಂದು ಆಪಾದಿಸಿ, ದಿಯಾನ್, ತಸ್ಲಿಂ, ಸಲ್ಮಾನ್ ಮತ್ತಿತರರು ಮೊಹಮ್ಮದ್ ನನ್ನು ಅಪಹರಿಸಿ ಕಾರಿನಲ್ಲಿ ಮಹಾಕಾಳಿ ಪಡ್ಪು ಬಳಿ ಕರೆದೊಯ್ದು ಕಾಲಿನಿಂದ ಒದ್ದು, ಸಿಗರೇಟ್ ನಿಂದ ಸುಟ್ಟು ಗಂಭಿರ ಹಲ್ಲೆ ನಡೆಸಿದ್ದಾರೆ. ಜೊತೆಗೆ ಅವರ ಸ್ನೇಹಿತರನ್ನು ಕರೆಸಿ ಕಾರಿನಲ್ಲಿ ಕೂರಿಸಿ ಪಡೀಲ್ ಕಣ್ಣೂರು ಬಳಿ ಖಾಲಿ ಜಮೀನೊಂದಕ್ಕೆ ಕರೆದೊಯ್ದು ಅಲ್ಲಿಯೂ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

LEAVE A REPLY

Please enter your comment!
Please enter your name here