ಅಸ್ವಸ್ಥನಾದ ಪೈಲಟ್‌ – ಸುರಕ್ಷಿತವಾಗಿ ವಿಮಾನ ಲ್ಯಾಂಡ್‌ ಮಾಡಿದ ಪ್ರಯಾಣಿಕ

ಮಂಗಳೂರು: ಸೌತ್ ವೆಸ್ಟ್ ಏರ್ ಲೈನ್ಸ್ ವಿಮಾನದ ಪೈಲಟ್ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ  ಕುಸಿದು ಬಿದ್ದಿದ್ದು ಪ್ರಯಾಣಿಕರ ಪೈಕಿ ವಿಮಾನ ಹಾರಾಟದ ಅನುಭವವಿಲ್ಲದ ಓರ್ವ ವ್ಯಕ್ತಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡುವ ಮೂಲಕ ವಿಮಾನದಲ್ಲಿದ್ದವರ ಪ್ರಾಣ ಕಾಪಾಡಿ ಎಲ್ಲರ ಮೆಚ್ಚುಗೆಗೆ  ಪಾತ್ರರಾಗಿದ್ದಾರೆ. ಫ್ಲೋರಿಡಾ ವಿಮಾನ ನಿಲ್ದಾಣದ‌ ಏರ್‌ ಟ್ರಾಫಿಕ್‌ ಕಂಟ್ರೋಲ್ ರೂಂನಿಂದ ವ್ಯಕ್ತಿಯೊಬ್ಬರು ಮಧ್ಯಸ್ಥಿಕೆ ವಹಿಸಿ ನೀಡುತ್ತಿದ್ದ ಮಾಹಿತಿ ಮತ್ತು ಸೂಚನೆಯನುಸರಿಸಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಗ್‌ ಮಾಡಲಾಗಿದೆ. 

ಅಮೆರಿಕದ ಓಹಿಯೊದ ಕೊಲಂಬಸ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದ್ದು, ಪ್ರಯಾಣದ ವೇಳೆ ಪೈಲಟ್  ಅಸ್ವಸ್ಥರಾಗಿದ್ದರು. ತುರ್ತು ವೈದ್ಯಕೀಯ ಆರೈಕೆಯ ಅಗತ್ಯತೆಯಿಂದಾಗಿ, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲು ನಿರ್ಧರಿಸಲಾಯಿತು. 20 ವರ್ಷಗಳ ಅನುಭವ ಹೊಂದಿದ್ದ ರಾರ್ಬಟ್‌ ಮೋರ್ಗನ್‌ ಅಂದು ರಜಾದಲ್ಲಿದ್ದು ಬಂದ ತುರ್ತು ಕರೆಯ ಹಿನ್ನಲೆಯಲ್ಲಿ ಸಂಬಂಧ ಪಟ್ಟ ವಿಮಾನದ ಕಾಕ್ ಪಿಟ್‌ನ ಪ್ರಿಂಟ್‌ ತೆಗೆದು ಮಾಹಿತಿ ನೀಡುವ ಮೂಲಕ ಏರ್ ಟ್ರಾಫಿಕ್ ಕಂಟ್ರೋಲ್ ನ ಉಸ್ತುವಾರಿ ವಹಿಸಿಕೊಂಡಿದ್ದರು. ವಿಮಾನ ನಿಯಂತ್ರಣಕ್ಕೆ ತೆಗೆದು ಕೊಂಡ ಬಳಿಕ ಒಂದೂವರೆ ಗಂಟೆಗಳ ಹಾರಾಟ ನಡೆಸಿ ಸುರಕ್ಷಿತವಾಗಿ ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಗಿದೆ. ತುರ್ತು ಸಂದರ್ಭದಲ್ಲಿ ಸಹಾಯ ಮಾಡಿದ ವ್ಯಕ್ತಿಗೆ ಸೌತ್‌ವೆಸ್ಟ್ ಏರ್‌ಲೈನ್ಸ್ ಧನ್ಯವಾದ ಸಲ್ಲಿಸಿದೆ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here