



ಮಂಗಳೂರು : ಕತಾರ್ನಲ್ಲಿ ಅಪಾರ್ಟ್ಮೆಂಟ್ ಕಟ್ಟಡ ಕುಸಿದು ಮೃತಪಟ್ಟ ಭಾರತೀಯರ ಸಂಖ್ಯೆ ನಾಲ್ಕಕ್ಕೇರಿದೆ. ಕೇರಳದ ಮತ್ತೊಂದು ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಕಾಸರಗೋಡು ಪುಲಿಕೂರು ಮೂಲದ ಮುಹಮ್ಮದ್ ಅಶ್ರಫ್ (38) ಎಂದು ಗುರುತಿಸಲಾಗಿದೆ.







ಘಟನೆಯಲ್ಲಿ ಮೃತಪಟ್ಟ ಮೂವರನ್ನು ಮಲಪ್ಪುರಂ ಪೊನ್ನಾನಿ ಮರಂಚೇರಿ ಮೂಲದ ನೌಶಾದ್ ಮನ್ನಾರೈಲ್, ಕಾಸರಗೋಡು ಮೂಲದ ಮುಹಮ್ಮದ್ ಅಶ್ರಫ್, ಮಲಪ್ಪುರಂ ನಿಲಂಬೂರ್ ಚಂಟಕುನ್ನ ನಿವಾಸಿ ಕತಾರ್ನ ಪ್ರಸಿದ್ಧ ಕಲಾವಿದ ಮೊಹಮ್ಮದ್ ಫೈಸಲ್ ಪರಪ್ಪುರವನ್ ಎಂದು ಗುರುತಿಸಲಾಗಿದೆ. ದೋಹಾ ಅಲ್ ಮನ್ಸೌರಾದಲ್ಲಿ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ಕುಸಿದಿತ್ತು. ಘಟನಾ ಸ್ಥಳದಿಂದ ಇಬ್ಬರು ಮಹಿಳೆಯರು ಸೇರಿದಂತೆ ಏಳು ಜನ ಗಾಯಾಳುಗಳನ್ನು ರಕ್ಷಿಸಲಾಗಿದೆ. 12 ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.














