ಸೂರತ್‌ ನ್ಯಾಯಾಲಯದಲ್ಲಿ ಜೈಲು ಶಿಕ್ಷೆ ಪ್ರಶ್ನಿಸಲಿರುವ ರಾಹುಲ್

ಮಂಗಳೂರು: 2019 ರ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷಗಳ ಶಿಕ್ಷೆಗೆ ಗುರಿಯಾಗಿ ಇತ್ತೀಚೆಗೆ ಸಂಸತ್ ನಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತನ್ನ ಮೇಲೆ ವಿಧಿಸಿರುವ ಜೈಲು ಶಿಕ್ಷೆಯನ್ನು ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ. 

ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿಯಲ್ಲಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ವಿಧಿಸಿದ ಮ್ಯಾಜಿಸ್ಟ್ರೇಟ್
ಅದೇಶವನ್ನು ರದ್ದುಗೊಳಿಸುವಂತೆ ಕೋರಲಾಗಿದೆ. ಪ್ರಕರಣ ಇತ್ಯರ್ಥವಾಗುವವರೆಗೆ ಶಿಕ್ಷೆಗೆ ಮಧ್ಯಂತರ ತಡೆ ನೀಡುವಂತೆ ಅವರು ಕೋರಿದ್ದಾರೆ. ಸೂರತ್ ನ್ಯಾಯಾಲಯ ಏ.3ರಂದು ಅವರ ಮನವಿಯನ್ನು ಆಲಿಸಲಿದೆ. ಮದ್ಯಾಹ್ನ 2 ಗಂಟೆಗೆ ರಾಹುಲ್‌ ಸೂರತ್‌ ಗೆ ಆಗಮಿಸಲಿದ್ದಾರೆ. ರಾಜಸ್ಥಾನ ಮುಖ್ಯ ಮಂತ್ರಿ ಅಶೋಕ್‌ ಗೆಹಲೋಟ್‌, ರಾಜ್ಯಸಭಾ ಸದಸ್ಯ ಕೆ ಸಿ ವೇಣು ಗೋಪಾಲ್‌ ಇಂದು ಸೂರತ್‌ ಗೆ ಭೇಟಿ ನೀಡಲಿದ್ದಾರೆ. ಮಾತ್ರವಲ್ಲದೇ ಪ್ರಿಯಾಂಕಾ ಗಾಂಧಿ, ಭೂಪೇಶ್‌ ಬಗೇಲ್‌, ಸುಕುವಿಂದರ್‌ ಸಿಂಗ್‌ ಸುಕು ಗುಜರಾತ್ ಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಇಂದು ಬೆಳಿಗ್ಗೆ ರಾಹುಲ್‌ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here