ಇಬ್ಬರು ಯುವತಿಯರನ್ನು ಕೂರಿಸಿ ವ್ಹೀಲಿಂಗ್- ಕೇಸು ದಾಖಲು

ಮಂಗಳೂರು: ಬೈಕೊಂದರಲ್ಲಿ ಇಬ್ಬರು ಯುವತಿಯರನ್ನು ಕೂರಿಸಿ ಯುವಕನೊಬ್ಬ ವ್ಹೀಲಿಂಗ್ ಮಾಡಿದ ವಿಡಿಯೋವೊಂದನ್ನು ಪಾಥ್ ಹೋಲ್ ವಾರಿಯರ್ಸ್ ಫೌಂಡೇಶನ್ ಫಾರ್‌ ರೋಡ್‌ ಸೇಫ್ಟಿ ಟ್ವೀಟ್ ಮಾಡಿದೆ. ಹೆಲ್ಮೆಟ್‌ ಧರಿಸದೆ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುವ ಬೈಕ್‌ ನ ನೋಂದಣಿ ಸಂಖ್ಯೆಯನ್ನು ಟ್ವೀಟ್‌ ಮಾಡುವ ಮೂಲಕ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. 

ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಯುವಕ ಮತ್ತು ಇಬ್ಬರು ಯುವತಿಯರ ವಿರುದ್ದ ಕೇಸು ದಾಖಲಿಸಲಾಗಿದೆ. ವಿಡಿಯೋದಲ್ಲಿ ಸುಮಾರು ಒಂದು ಕಿ.ಮೀ ದೂರದ ವರೆಗೆ ಹಿಂದೊಬ್ಬಳು, ಮುಂದೊಬ್ಬಳು ಯುವತಿಯರನ್ನು ಕೂರಿಸಿ ವ್ಹೀಲಿಂಗ್ ಮಾಡಲಾಗಿದೆ. ವಿಡಿಯೋ ನೋಡಿದವರು ತಮ್ಮ ಪ್ರಾಣಕ್ಕೆ ಮಾತ್ರವಲ್ಲದೆ ರಸ್ತೆಯಲ್ಲಿ ಸಂಚಾರಿಸುವವರ ಜೀವಕ್ಕೂ ಸಂಚಕಾರ ತರಲಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಂದ ಹಾಗೆ ಇದು ನಡೆದಿರುವುದು ನೆರೆಯ ಮಹಾರಾಷ್ಟ್ರದ ಮುಂಬೈಯಲ್ಲಿ. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here