ಮಂಗಳೂರು: ಗುಜರಾತ್ ನ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ತೀರ್ಪಿನ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಲಾಗಿದ್ದು ಸರಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸು ನೀಡಲಾಗಿತ್ತು.
ಈ ಘಟನೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನ್ನ ಮನೆ ರಾಹುಲ್ ಮನೆ ಎಂದು ಘೋಷಿಸಿದ್ದು ಅಭಿಯಾನವೊಂದಕ್ಕೆ ನಾಂದಿಯಾಯಿತು. ಇದರ ಮುಂದುವರಿದ ಭಾಗವಾಗಿ ದೆಹಲಿಯ ಕಾಂಗ್ರೆಸ್ ಪಕ್ಷದ ಸೇವಾದಳದ ಅಧ್ಯಕ್ಷೆ ರಾಜಕುಮಾರಿ ಗುಪ್ತ ಎಂಬವರು ಎಲ್ಲರಿಗಿಂತಲೂ ಮುಂದೆ ಹೋಗಿ ತನ್ನ ಮನೆಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ. 4 ಅಂತಸ್ತಿನ ತನ್ನ ಮನೆಯನ್ನು ರಾಹುಲ್ ಗಾಂಧಿ ಹೆಸರಿಗೆ ವರ್ಗಾಯಿಸಿ ದಾಖಲೆ ಸಿದ್ದಪಡಿಸಿದ್ದು, ಮೋದಿಜಿಯವರು ರಾಹುಲ್ ಗಾಂಧಿಯನ್ನು ಮನೆಯಿಂದಷ್ಟೇ ಹೊರಹಾಕಬಲ್ಲರು, ಜನರ ಹೃದಯದಿಂದಲ್ಲ ಎಂದು ರಾಜಕುಮಾರಿ ಗುಪ್ತಾ ಹೇಳಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
दिल्ली महिला कांग्रेस सेवादल की अध्यक्ष श्रीमती राजकुमारी गुप्ता जी ने मंगोलपुरी इलाके में अपना घर श्री @RahulGandhi जी के नाम कर दिया है, उन्हें यह घर इंदिरा गांधी जी के समय मिला था।
राजकुमारी जी बोलीं कि मोदी जी, राहुल जी को घर से निकाल सकते हैं, लेकिन लोगों के दिल से नहीं। pic.twitter.com/6wSx8mBhiv
— Congress Sevadal (@CongressSevadal) April 1, 2023