ಮಂಗಳೂರು: ಟ್ವಿಟ್ಟರ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಲಾನ್ ಮಸ್ಕ್ ಟ್ವಿಟ್ಟರ್ ನ ಲೋಗೋ ಬದಲಾಯಿಸಿದ್ದಾರೆ.
ಇದುವರೆಗಿದ್ದ ನೀಲಿ ಹಕ್ಕಿಯ ಲೋಗೋವನ್ನು ನಾಯಿಯ ಚಿತ್ರಕ್ಕೆ ಬದಲಾಯಿಸಲಾಗಿದೆ.ಇದು ವಿಶ್ವದಾದ್ಯಂತ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ನೀಲಿ ಹಕ್ಕಿಯ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್ ಕಾಯಿನ್ ನ ನಾಯಿಯ ಮೀಮ್ಸ್ ಫೋಟೋವನ್ನು ಬಳಸಿದ್ದಾರೆ. ಮಸ್ಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಆದರೆ ಈ ಬದಲಾವಣೆ ಕೇವಲ ವೆಬ್ ಆವೃತ್ತಿಗೆ ಸೀಮಿತವಾಗಿದೆ. ಮೊಬೈಲ್ ಗಳಲ್ಲಿ ನೀಲಿ ಹಕ್ಕಿಯ ಲೋಗೋ ಕಾಣಿಸಲಿದೆ.