ರಾಜ್ಯದಲ್ಲಿ ಮೋದಿಯ 20 ಕಾರ್ಯಕ್ರಮಗಳು ಫಿಕ್ಸ್

ಮಂಗಳೂರು: ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 20ಕ್ಕೂ ಹೆಚ್ಚು ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯದ ಒಟ್ಟು 6 ಪ್ರಾಂತ್ಯಗಳ ಪೈಕಿ ಪ್ರತಿ ಪ್ರಾಂತ್ಯದಲ್ಲೂ ತಲಾ ಮೂರು ಸಮಾವೇಶಗಳನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರಲ್ಲೂ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ 40 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪ್ರಾಂತ್ಯದಲ್ಲಿ ಪ್ರಧಾನಿ ಮೋದಿ ಹೆಚ್ಚು ಸಮಾವೇಶಗಳನ್ನು ನಡೆಸಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮತದಾನಕ್ಕೆ ಕೇವಲ 35 ದಿನಗಳು ಮಾತ್ರ ಉಳಿದಿದ್ದು, ಪ್ರಚಾರದ ಭರಾಟೆ ಜೋರಾಗುತ್ತಿದೆ. ಮೂರು ಪಕ್ಷಗಳಲ್ಲಿಯೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಗೊಂದಲದ ನಡುವೆ ರಾಜೀನಾಮೆ ಮತ್ತು ಪಕ್ಷಾಂತರದ ಪರ್ವ ಆರಂಭಗೊಂಡಿದೆ. ಈ ನಡುವೆ ಎ.8ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here