ಮಂಗಳೂರು (ಟರ್ಕಿ): ಈಕೆ ವಿಶ್ವದ ಅತೀ ಎತ್ತರದ ಮಹಿಳೆ ರುಮೆಸಾ ಗೆಲ್ಲಿ. ಅಪರೂಪದ ಕಾಯಿಲೆಗೆ ತುತ್ತಾಗಿರುವ ರುಮೆಸಾ ಈಗ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಟರ್ಕಿಯ ಸಫ್ರಾನ್ಟೋಲು ಜಿಲ್ಲೆಯಲ್ಲಿ ಜನಿಸಿದ ರುಮೆಸಾಳ ಎತ್ತರ 7 ಅಡಿ 07 ಇಂಚು. ಈಕೆ ವಿಶ್ವದ ಎತ್ತರದ ಮಹಿಳೆ ಮಾತ್ರವಲ್ಲದೆ ದೊಡ್ಡ ಕೈಕಾಲುಗಳು, ಉದ್ದವಾದ ಬೆರಳುಗಳು ಮತ್ತು ಉದ್ದವಾದ ಬೆನ್ನೆಲುಬು ಹೊಂದಿರುವ ಇವರ ಹೆಸರಿನಲ್ಲಿ ಐದು ವಿಶ್ವ ದಾಖಲೆಗಳಿದೆ. ಸಾಕಷ್ಟು ಕಷ್ಟ ನಷ್ಟ ಎದುರಿಸುತ್ತಿರುವ ಈಕೆ ಪ್ರತಿಭಾವಂತೆ. ಹೀಗಾಗಿ ಉತ್ತಮ ಉದ್ಯೋಗದಲ್ಲಿದ್ದಾರೆ. ರುಮೆಸಾ ನಾಲ್ಕು ತಿಂಗಳ ಮಗುವಿದ್ದಾಗ ವೀವರ್ಸ್ ಸಿಂಡ್ರೋಮ್ ಇರುವುದು ಪತ್ತೆಯಾಗಿದೆ. ಅನುವಂಶಿಕ ಸಮಸ್ಯೆಯಾಗಿರುವ ಇದರಿಂದಾಗಿ ಈಕೆ 6 ವರ್ಷಗಳಿರುವಾಗಲೇ 5 ಅಡಿ 08 ಇಂಚು ಎತ್ತರಕ್ಕೆ ಬೆಳೆದಿದ್ದಳು. ವಿಶ್ವದಲ್ಲಿ ಕೇವಲ 50 ಜನರು ಇಂತಹ ಕಾಯಿಲೆಯಿಂದ ಬಳಲುತ್ತಿದ್ದು, ಇಂತಹವರ ಹೃದಯಕಾರ್ಯ ಚಟುವಟಿಕೆಯಲ್ಲಿ ತೊಂದರೆ ಕಂಡು ಬರುತ್ತದೆ. ರುಮೆಸಾ ಬೆನ್ನು ಮೂಳೆ ಒಂದು ಬದಿಗೆ ಬಾಗಿದ್ದು ನಡೆದಾಡಲೂ ಕಷ್ಟವಾಗುತ್ತಿದೆ. ವೈದ್ಯರು ದೇಹದ ಕೆಲವೆಡೆ ಕಬ್ಬಿಣದ ರಾಡ್ ಮತ್ತು ಸ್ಕ್ರೂ ಅಳವಡಿಸಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://www.instagram.com/p/CU95freDwkz/?utm_source=ig_web_button_share_sheet