ಮಂಗಳೂರು : ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಏಪ್ರಿಲ್ 15 ರ ರಾತ್ರಿ ನಿದ್ದೆ ಮಂಪರಿನಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ವ್ಯಕ್ತಿ ಬಾವಿಗೆ ಬಿದ್ದಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಲ್ಟರ್ ಮೊಂತೆರೊ ಮೃತ ವ್ಯಕ್ತಿ.
ಶನಿವಾರ ಸಂಜೆ ಚರ್ಚೆಗೆ ತೆರಳಿದ್ದ ವಾಲ್ಟರ್ 7 ಗಂಟೆಗೆ ಮರಳಿ ಮನೆಗೆ ಬಂದಿದ್ದು ಬಾವಿಕಟ್ಟೆ ಮೇಲೆ ಕುಳಿತಿದ್ದರು. ಅಲ್ಲೇ ನಿದ್ದೆಗೆ ಜಾರಿದ ವಾಲ್ಟರ್ ಬಾವಿಗೆ ಬಿದ್ದಿದ್ದಾರೆ. ಆಳವಿಲ್ಲದ ಬಾವಿಯಿಂದ ತಕ್ಷಣ ಅವರನ್ನು ಮೇಲೆತ್ತಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ತಲೆಗೆ ಬಲವಾದ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.