1 ರೂ. ಪಡೆಯದೆ 125 ವಿಚ್ಛೇದನ ಪ್ರಕರಣ ಸುಖಾಂತ್ಯಗೊಳಿಸಿದ್ದ ವಕೀಲರಿಗೆ ಪತ್ನಿಯಿಂದ ವಿಚ್ಛೇದನೆ

ಮಂಗಳೂರು: ಒಂದು ರೂಪಾಯಿಯನ್ನು ಶುಲ್ಕವಾಗಿ ಪಡೆಯದೆ 125ಕ್ಕೂ ಹೆಚ್ಚು ಅಧಿಕ ಪತಿಪತ್ನಿಯರ ವಿಚ್ಛೇದನವನ್ನು ತಡೆದಿದ್ದ ವಕೀಲರೊಬ್ಬರಿಗೆ ತಮ್ಮ ಪತ್ನಿಯೇ ಡೈವೋರ್ಸ್ ನೀಡಿದ ವಿಲಕ್ಷಣ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಯಾವುದೇ ಶುಲ್ಕ ಪಡೆಯದೆ ತಮ್ಮ ಹದಿನಾರು ವರ್ಷಗಳ ವೃತ್ತಿ ಜೀವನದಲ್ಲಿ ಹಿರಿಯ ವಕೀಲರೊಬ್ಬರು 125 ಕ್ಕೂ ಅಧಿಕ ವಿಚ್ಛೇದನ ಪ್ರಕರಣಗಳನ್ನು ಸುಖಾಂತ್ಯಗೊಳ್ಳುವಂತೆ ಬಗೆಹರಿಸಿದ್ದರು. ಒಡೆದ ಮನಸ್ಸುಗಳನ್ನು ಒಂದುಗೂಡಿಸಿ ಮತ್ತೆ ಸುಖೀ ದಾಂಪತ್ಯ ನಡೆಸುವಂತೆ ಪ್ರೇರೇಪಿಸಿದ್ದರು. ಆದರೆ ದುರದೃಷ್ಟವಶಾತ್ ಅವರ ಪತ್ನಿಯೇ ಡೈವೋರ್ಸ್ ನೀಡಿ ಸಂಸಾರ ಸುಖವನ್ನು ಕೊನೆಗಾಣಿಸಿದ್ದಾರೆ.

ಹಣಕಾಸಿನ ಮುಗ್ಗಟ್ಟು ವಕೀಲರ ಪತ್ನಿಗೆ ವಿಚ್ಛೇದನ ನೀಡಲು ಏಕೈಕ ಕಾರಣವಾಗಿದೆ. ವಕೀಲರು ತಮ್ಮ ಬಳಿ ಬರುವ ದಂಪತಿಗೆ ಬುದ್ಧಿ ಮಾತು ಹೇಳುತ್ತಾರೆ. ಆದರೆ ಅವರಿಂದ ಯಾವುದೇ ಹಣ ಪಡೆಯುತ್ತಿಲ್ಲ ಈ ರೀತಿ ಆದರೆ ನಮ್ಮ ಬದುಕು ಸಂಕಟಮಯವಾಗುತ್ತದೆ. ಹೆಸರಾಂತ ವಕೀಲರಾದರು ಹಣ ಇಲ್ಲದಿದ್ದರೆ ಸಂಸಾರ ನಡೆಸುವುದು ಹೇಗೆ? ಏನೇ ಆದರೂ ಗಂಡ ಬದಲಾಗುವುದಿಲ್ಲ. ಹಾಗಾಗಿ ನಾನು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ, ಪತಿಯಿಂದ ವಿಚ್ಛೇದನ ಬಯಸಿದ್ದೇನೆ ಎಂದು ವಕೀಲರ ಪತ್ನಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here