ಯುವತಿ ಪಾಲಿಗೆ ಪನಿಶ್ ಮೆಂಟ್‌ ಆದ ಬ್ಯೂಟಿ ಟ್ರೀಟ್ ಮೆಂಟ್-ದೂರು ದಾಖಲು

ಮಂಗಳೂರು(ಮುಂಬೈ): ತಾನು ಚಂದ ಕಾಣಬೇಕು ಎಂಬುದು ಎಲ್ಲಾ ಮಹಿಳೆಯರ ಬಯಕೆ. ಅದಕ್ಕಾಗಿ ಪ್ರಸಾದನಕ್ಕೆಂದೇ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇಲ್ಲೊಬ್ಬಳು ಯುವತಿ, ತಾನು ಚಂದ ಕಾಣಬೇಕು ಎಂದು ಬರೋಬ್ಬರಿ 17,500 ರೂಪಾಯಿ ಕೊಟ್ಟು ಫೇಶಿಯಲ್ ಮಾಡಿಸಿಕೊಂಡಿದ್ದಾಳೆ. ಆದರೆ ಚಂದ ಕಾಣುವ ಬದಲು ಆಗಿದ್ದೇ ಬೇರೆ. ಫೇಶಿಯಲ್ ಮಸಾಜ್ ಟ್ರೀಟ್ಮೆಂಟ್ ಬಳಿಕ ಆಕೆಯ ಮುಖದ ಚರ್ಮದಲ್ಲಿ ಸುಟ್ಟ ಗಾಯಗಳಾಗಿದ್ದು ಶಾಶ್ವತವಾಗಿ ಹಾನಿಗೊಳಗಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಮುಂಬೈನ ಬ್ಯೂಟಿ ಸಲೂನ್ ವಿರುದ್ಧ ದೂರು ದಾಖಲಿಸಿದ್ದಾಳೆ.

ವೈದ್ಯಕೀಯ ದರ್ಜೆಯ ರೀ ಸರ್ಫೇಸಿಂಗ್ ಚಿಕಿತ್ಸೆ ಹೈಡ್ರೋ ಫೇಶಿಯಲ್. ಇದು ಮುಖದ ಚರ್ಮದ ರಂದ್ರಗಳನ್ನು ಕ್ಲಿಯರ್ ಮಾಡುತ್ತದೆ. ಅಲ್ಲದೆ, ಚರ್ಮವನ್ನು ಕೂಡ ಹೈಡ್ರೇಟ್ ಮಾಡುತ್ತದೆ. ಪರವಾನಗಿ ಪಡೆದ ವೈದ್ಯಕೀಯ ವೃತ್ತಿಪರ ಅಥವಾ ಪ್ರಮಾಣೀಕೃತ ಸೌಂದರ್ಯ ತಜ್ಞರು ಲಭ್ಯವಿರುವಲ್ಲಿ ಮಾತ್ರ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದರೆ ಈ ಚಿಕಿತ್ಸೆ ಪಡೆದ ಯುವತಿಯ ಮುಖದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಮುಖದ ಚರ್ಮದಲ್ಲಿ ಸುಟ್ಟ ಗಾಯಗಳಾಗಿದೆ. ಈ ಹಿನ್ನಲೆಯಲ್ಲಿ ಯುವತಿ ಚರ್ಮ ತಜ್ಞರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಮಸಾಜಿನಿಂದ ಚರ್ಮದಲ್ಲಿ ಸುಟ್ಟ ಗಾಯಗಳಾಗಿದ್ದು, ಸಮಸ್ಯೆ ಶಾಶ್ವತವಾಗಿ ಉಳಿಯುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ಯುವತಿ ಸ್ಥಳೀಯ ಕಾರ್ಪೊರೇಟರ್ ಸಹಾಯದಿಂದ ಬ್ಯೂಟಿ ಸಲೂನ್‌ ವಿರುದ್ದ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here