ರಾಜಧಾನಿಯಲ್ಲಿ ಟ್ರಾಫಿಕ್‌ ನಿಯಂತ್ರಣಕ್ಕೆ ಡ್ರೋನ್‌ ಬಳಕೆ

ಮಂಗಳೂರು (ಬೆಂಗಳೂರು): ಬೆಂಗಳೂರು ನಗರದ 20 ಜಂಕ್ಷನ್ ಗಳಲ್ಲಿ ನಿತ್ಯ ಉಂಟಾಗುವ ಸಂಚಾರದಟ್ಟನೆ ನಿಯಂತ್ರಿಸಲು ಮುಂದಾಗಿರುವ ಪೊಲೀಸರು ಜಂಕ್ಷನ್ ಗಳಲ್ಲಿ ಡ್ರೋನ್ ಹಾರಿಸಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ನಗರದ ಸಂಚಾರ ದಟ್ಟಣೆಯಿಂದ ಜನ ಬೇಸತ್ತಿದ್ದಾರೆ. ದಟ್ಟಣೆ ನಿಯಂತ್ರಿಸಲು ತ್ವರಿತ ಕ್ರಮ ಕೈಗೊಳ್ಳಿ ಎಂದು ಗ್ರಹ ಸಚಿವ ಜಿ ಪರಮೇಶ್ವರ್ ಇತ್ತೀಚೆಗೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ 20 ಜಂಕ್ಷನ್ ಗಳ ಪಟ್ಟಿ ಮಾಡಿರುವ ಸಂಚಾರ ಪೊಲೀಸರು ಅಲ್ಲಿಯ ದಟ್ಟಣೆಗೆ ಪರಿಹಾರ ಕಂಡುಹಿಡಿದಿದ್ದಾರೆ.

ಸುರಕ್ಷಿತ ನಗರ ಯೋಜನೆಯಡಿ 8 ಡ್ರೋನ್ ಕ್ಯಾಮರಾಗಳನ್ನು ಖರೀದಿಸಲಾಗಿದೆ. ಅದರಲ್ಲಿ ನಾಲ್ಕು ಕ್ಯಾಮರಾಗಳನ್ನು ಸಂಚಾರ ಪೊಲೀಸರಿಗೆ ನೀಡಲಾಗಿದೆ. ಡ್ರೋನ್ ಗಳನ್ನು ಸಂಚಾರ ಪೊಲೀಸರು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದು, ಯಾವ ರಸ್ತೆಯಲ್ಲಿ ಎಷ್ಟು ದಟ್ಟಣೆ ಇದೆ? ಅದಕ್ಕೆ ಕಾರಣವೇನು? ಎಂಬುದನ್ನು ದೃಶ್ಯಗಳ ಸಮೇತ ಸೆರೆ ಹಿಡಿದಿದ್ದಾರೆ. ಡ್ರೋನ್ ಕ್ಯಾಮರದಲ್ಲಿ ಸೆರೆಯಾದ ದೃಶ್ಯಗಳು ಸಂಚಾರ ನಿರ್ವಹಣಾ ಕೇಂದ್ರದ ಸರ್ವರ್ ಗೆ ರವಾನೆ ಆಗಲಿದೆ. ಡ್ರೋನ್ ಬಳಕೆ ಬಗ್ಗೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here