ಮಂಗಳೂರು (ಮೆಕ್ಕ ):ಭೂಲೋಕದ ಅತೀದೊಡ್ಡ ಮಾನವ ಸಂಗಮಕ್ಕೆ ತೆರೆ ಬಿದ್ದಿದ್ದು ಹಜ್ ಕರ್ಮ ಪೂರ್ಣಗೊಂಡಿದೆ.
ವಿಶ್ವದ ಸುಮಾರು 160 ರಾಷ್ಟ್ರಗಳಿಂದ ಬಂದ 20 ಲಕ್ಷಕ್ಕೂ ಹೆಚ್ಚು ಹಜ್ ಯಾತ್ರಿಕರು ‘ಅರಫಾ’ ಮರುಭೂಮಿಯಲ್ಲಿ ಬಿಳಿ ವಸ್ತ್ರಧಾರಿಗಳಾಗಿ ಒಟ್ಟು ಸೇರಿದ್ದಾರೆ. ರಾಜ, ಸೇವಕ, ಬಿಳಿಯ, ಕರಿಯ,ಅರಬ, ಅರಬೇತರ ಎಂಬ ಬೇದಭಾವವಿಲ್ಲದೆ ಎಲ್ಲರೂ ಅರಫಾ ಮೈದಾನ ಎಂಬ ಸುಡುಬಿಸಿಲಿನ ಮರುಭೂಮಿಯಲ್ಲಿ ಒಟ್ಟು ಸೇರುವುದೇ ‘ಹಜ್’ ಕರ್ಮದ ಮಹತ್ವದ ಭಾಗವಾಗಿದೆ. ಅದು ಇಂದು ಪೂರ್ಣಗೊಳ್ಳುವ ಮೂಲಕ ಹಜ್ ಕರ್ಮಗಳಿಗೆ ತೆರೆ ಬಿದ್ದಿದೆ.
45 ಡಿಗ್ರಿಗಿಂತ ಹೆಚ್ಚಿನ ಸುಡು ಬಿಸಿಲನ್ನು ಲೆಕ್ಕಿಸದೆ ಅಲ್ಲಾಹನ ಸಂತ್ರಪ್ತಿಯನ್ನು ಮಾತ್ರ ಬಯಸಿ ‘ಲೆಬ್ಬೈಕಲ್ಲಾಹುಮ್ಮ ಲೆಬ್ಬೈಕ್’ ಎಂಬ ತಕ್ಬೀರ್ ಘೋಷಣೆಯೊಂದಿಗೆ ಹಜ್
ಯಾತ್ರಾರ್ಥಿಗಳ
ಅಪೂರ್ವ ಸಂಗಮವನ್ನು ಅರಫಾದಲ್ಲಿ ನೋಡುವುದೇ ಒಂದು ರೋಮಾಂಚನವಾಗಿದೆ.