ಕಾಸರಗೋಡು: ಭಾರೀ ಗಾಳಿಮಳೆ – ಮರಬಿದ್ದು 11ರ ಬಾಲೆ ಮೃತ್ಯು

ಮಂಗಳೂರು: ಭಾರೀ ಗಾಳಿ ಮಳೆಗೆ ಮರ ಬಿದ್ದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಪುತ್ತಿಗೆ ಸಮೀಪದ ಅಂಗಡಿಮೊಗರಿನಲ್ಲಿ ಜು.3 ರಂದು ಸಂಜೆ ನಡೆದಿದೆ.

ಅಂಗಡಿಮೊಗರು ಸರಕಾರಿ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆಯಿಷತ್ ಮಿನ್ ಹಾ(11) ಮೃತಪಟ್ಟ ವಿದ್ಯಾರ್ಥಿನಿ. ಸಂಜೆ 4:00 ಸುಮಾರಿಗೆ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಸಂದರ್ಭದಲ್ಲಿ ಗಾಳಿಗೆ ಮರ  ಬಾಲಕಿ ಮೈ ಮೇಲೆ ಮುರಿದು ಬಿದ್ದಿದೆ. ಸ್ಥಳೀಯರು ಬಾಲಕಿಯನ್ನು ತಕ್ಷಣ ಕುಂಬಳೆ ಆಸ್ಪತ್ರೆಗೆ ಕರೆದೊಯ್ದರಾದರೂ ಅದಾಗಲೇ ಬಾಲಕಿ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here