ಬಿಟ್ ಕಾಯಿನ್‌ ಹಗರಣ-ಮರು ತನಿಖೆಗೆ ರಾಜ್ಯ ಸರಕಾರದ ಆದೇಶ

ಮಂಗಳೂರು: ರಾಜ್ಯದಲ್ಲಿ ಬಾರಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣಕ್ಕೆ ಮರುಜೀವ ನೀಡಿದ್ದು ಪ್ರಕರಣವನ್ನು ಮರುತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆದೇಶ ನೀಡಿದೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ಈ ಬಿಟ್ ಕಾಯಿನ್ ಹಗರಣ ನಡೆದಿದ್ದು, 2020ರಲ್ಲಿ ಬಿಟ್ ಕಾಯಿನ್ ನಗರ ಸಂಬಂಧ ಬೆಂಗಳೂರಿನ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ವಿಶೇಷ ತಂಡ ರಚಿಸಿ ಹೆಚ್ಚಿನ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರು ಸಿಐಡಿ ಡಿಜಿಪಿ ಎಂ ಎ ಸಲೀಮ್‌ ಅವರಿಗೆ ಪತ್ರ ಬರೆದಿದ್ದರು. ಬಳಿಕ ಅಲೋಕ್ ಮೋಹನ್ ಪತ್ರದ ಮೂಲಕ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಸರಕಾರ ಮನುತನಿಖೆಗೆ ಆದೇಶಿಸಿದೆ.

ಹಗರಣವನ್ನು ಮರುತನಿಖೆಗೆ ವಹಿಸುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಗ್ರಹ ಸಚಿವ ಡಾ. ಜಿ ಪರಮೇಶ್ವರ್, ನಾವು ಹಿಂದೆ ಬಿಜೆಪಿ ಸರ್ಕಾರದ ಬಿಟ್ ಕಾಯಿನ್ ವಿಚಾರದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಬಗ್ಗೆ ಮಾತನಾಡಿದ್ದೆವು. ಈಗ ಬಿಟ್ ಕಾಯಿನ್ ಪ್ರಕರಣ ಮರುತನಿಖೆಗೆ ಆದೇಶಿಸಿದ್ದೇವೆ. ಸಿಐಡಿ ಅಡಿಯಲ್ಲಿ ಎಸ್ಐಟಿ ರಚನೆ ಮಾಡಿದ್ದೇವೆ. ಸಂಬಂಧಿಸಿದ ಆದೇಶಗಳನ್ನೂ ಮಾಡುತ್ತೇವೆ. ತಾಂತ್ರಿಕವಾಗಿ ಹಗರಣ ಅಂತರ್ ರಾಜ್ಯ‌, ಅಂತರಾಷ್ಟ್ರೀಯ ಮಟ್ಟದಲ್ಲಿ ಇರುವುದರಿಂದ ನಿಗದಿತ ಸಮಯದಲ್ಲಿ ತನಿಖೆ ಮುಗಿಯಲಿದೆ ಎಂದು ಹೇಳಲಾಗದು ಎಂದು ಹೇಳಿದ್ದಾರೆ. ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ನಿಟ್ಟಿನಲ್ಲಿ ಎಸ್ಐಟಿ ರಚನೆ ಮಾಡಿ ರಾಜ್ಯ ಸರಕಾರ ಆದೇಶ ನೀಡಿದೆ.

ಆರ್ಥಿಕ ಅಪರಾಧ ಘಟಕದ ಎಡಿಜಿಪಿ ಮನಿಷ್ ಕರ್ಭಿಕರ್ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದ್ದು, ನಾಲ್ವರು ಇತರ ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಆರ್ಥಿಕ ಅಪರಾಧ ವಿಭಾಗದ ಡಿಜಿಪಿ ಡಾ. ಕೆ ವಂಶಿಕೃಷ್ಣ, ಡಿಸಿಪಿ ಡಾ. ಅನೂಪ್ ಎ ಶೆಟ್ಟಿ‌, ಆರ್ಥಿಕ ಅಪರಾಧಗಳು ಮತ್ತು ಸೈಬರ್ ಅಪರಾಧ ವಿಭಾಗದ ಅಧೀಕ್ಷಕ ಶರತ್ ಈ ತಂಡದಲ್ಲಿದ್ದಾರೆ.

LEAVE A REPLY

Please enter your comment!
Please enter your name here