ವಿಧಾನಸಭಾ ಅಧಿವೇಶನ ಜು.21ರ ವರೆಗೆ ವಿಸ್ತರಣೆ

ಮಂಗಳೂರು: ವಿಧಾನ ಮಂಡಲ ಅಧಿವೇಶನವನ್ನು ಜುಲೈ 21ರವರೆಗೆ ವಿಸ್ತರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ತಿಳಿಸಿದ್ದಾರೆ.

ವರ್ಷದಲ್ಲಿ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕೆಂಬ ಆಶಯ ಹೊಂದಿರುವ ಕಾರ್ಯಕಲಾಪಗಳ ಸಮಿತಿಯು ಜುಲೈ 14 ರಂದು ಕೊನೆಗೊಳ್ಳಬೇಕಾಗಿದ್ದ ಪ್ರಸಕ್ತ ಅಧಿವೇಶನವನ್ನು ಜುಲೈ 21 ರವರೆಗೆ ವಿಸ್ತರಿಸಲು ನಿರ್ಧರಿಸಿದ ನಿರ್ಣಯವನ್ನು ಸ್ಪೀಕರ್ ಪ್ರಕಟಿಸಿದ್ದಾರೆ. ಜುಲೈ 10 ರಿಂದ 19 ರವರೆಗೆ ಇಲಾಖಾವಾರು ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಜುಲೈ 20 ರಂದು ಹಣಕಾಸು ವಿಧೇಯಕಗಳ ಅಂಗೀಕಾರವಿರಲಿದೆ ಎಂದು ಸ್ಪೀಕರ್ ತಿಳಿಸಿದ್ದಾರೆ.

ನಿಗದಿತ ಅವಧಿಗೆ ಸದನಕ್ಕೆ ಬಂದ ಶಾಸಕರಿಗೆ ಬಹುಮಾನವಾಗಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಯು ಟಿ ಖಾದರ್‌ ಘೋಷಣೆ ಮಾಡಿದ್ದಾರೆ. ಜು.5 ರಂದು ನಿಗದಿತ ಸಮಯಕ್ಕೆ ಆಗಮಿಸಿದ ಶಾಸಕರ ಬಗ್ಗೆ ಸಭಾಪತಿ ಖಾದರ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here