ಚಮರೀ ಮೃಗ(Bos grunniens)
ಮಕ್ಕಳಿಗಾಗಿ ವಿಶೇಷ ಮಾಹಿತಿ
ರೇಷ್ಮೆಯಂತಹ ಉದ್ದ ಕೂದಲಿನ ಈ ಚಮರೀ ಮೃಗ ಹಿಮಾಲಯ ಪ್ರಾಂತ್ಯ ಹಾಗು ದ.ಮಧ್ಯ ಏಷಿಯಾ , ಟಿಬೇಟ್ ಪ್ರಸ್ಥಭೂಮಿಯಿಂದ ಹಿಡಿದು ಉತ್ತರದ ಮಂಗೋಲಿಯಾ ಹಾಗು ರಷ್ಯಾದಲ್ಲಿಯೂ ಕಂಡುಬರುತ್ತದೆ.
ಚಮರೀ ಮೃಗದಲ್ಲಿ ಎರಡು ವಿಧ:ಸಾಕು ಚಮರಿ ಮೃಗ ಹಾಗೂ,ವನ್ಯ ಚಮರೀ ಮೃಗ.
ವನ್ಯ ಚಮರೀ ಮೃಗವು 305-1000ಕೆ.ಜಿ, 8.2-11ಅಡಿ ಅಗಲ 5.2-7.2 ಎತ್ತರವಿರುತ್ತದೆ. ವನ್ಯ ಚಮರಿ ಮೃಗವು ಗಂಡಿಗಿಂತ ಸುಮಾರು 30ಶೇ(ಪ್ರತಿಶತ) ಆಕಾರದಲ್ಲಿ ಚಿಕ್ಕದಾಗಿರುತ್ತದೆ. ಸಾಕು ಚಮರೀ ಮೃಗವು ಗಂಡು-350-580 ಕೆ.ಜಿ ಹಾಗೂ ಹೆಣ್ಣು-225-255ಕೆ.ಜಿ ತೂಕವಿರುತ್ತದೆ.
ನೋಡಲು ದೈತ್ಯಾಕಾರವಿದ್ದರೂ ಸುಲಭವಾಗಿ ತರಬೇತಿ ನೀಡಬಹುದು. ಗಂಡು ಚಮರೀ ಮೃಗದ ಕೊಂಬು 19-39 ಇಂಚುಗಳಿದ್ದು, ಹೆಣ್ಣು ಮೃಗದ ಕೊಂಬು 11-25ಇಂಚಿನಷ್ಟು ಉದ್ದವಿರುತ್ತದೆ.
ಚಮರೀ ಮೃಗದ ಕಿವಿಗಳು ಹಾಗು ಕತ್ತು ಚಿಕ್ಕದಾಗಿರುತ್ತದೆ. ಬೆನ್ನ ಮೇಲೆ ಗೂನು(ಹಿಳಲು) ಇರುತ್ತದೆ. ಗಂಡು ಮೃಗ ಹೆಚ್ಚು ಎತ್ತರವಾಗಿ ಕಾಣುತ್ತದೆ. ಗಂಡು ಮೃಗದ ರೋಮಗಳು(ತುಪ್ಪಳ)/ ಉಣ್ಣೆ ನೆಲಸೋಕುವಷ್ಟು ಉದ್ದಗಿರುತ್ತದೆ. ಕುದುರೆಯ ಹಾಗೆ ಉದ್ದ ಬಾಲವಿರುತ್ತದೆ. ಮುಸುಡಿಯು ಬೂದು ಬಣ್ಣವಿದ್ದು ರೋಮಗಳು ಕಪ್ಪು ಅಥವಾ ಕಡು ಕಂದು ಬಣ್ಣದಾಗಿರುತ್ತದೆ.
ಸಾಕು ಮೃಗದ ಮೈ ಬಣ್ಣ ಬಿಳಿ, ಬೂದು, ಕಂದು, ಕೆಂಪು ಮಿಶ್ರಿತ ಹೀಗೆ ಹಲವು ಮಿಶ್ರಣಗಳಲ್ಲಿ ಕಾಣಬಹುದು.
ದೇಹದ ಮೇಲೆ ಅಷ್ಟೇ ಅಲ್ಲದೆ ತೊಡೆ, ದೇಹದ ಸೂಕ್ಷ್ಮ ಭಾಗಗಳು, ಎದೆ ಇವೆಲ್ಲವೂ ದಪ್ಪ ದಟ್ಟ ತುಪ್ಪಳದಿಂದ ಕೂಡಿರುತ್ತದೆ. ಇದು ಚಮರೀ ಮೃಗಕ್ಕೆ ಚಳಿಯಿಂದ, ಸೀತದಿಂದ ರಕ್ಷಣೆ ಕೊಡುತ್ತದೆ.