ರಾಮ ಮಂದಿರಕ್ಕಾಗಿ 400 ಕೆಜಿ ತೂಕದ ಬೀಗ!

ಆಗ್ರಾ: ಅಲೀಗಢದ 66 ವರ್ಷ ವಯಸ್ಸಿನ ಬೀಗ ತಯಾರಕರೊಬ್ಬರು 400 ಕೆಜಿ ತೂಕದ 10 ಅಡಿ ಎತ್ತರ, 4.6 ಅಡಿ ಅಗಲ ಹಾಗೂ 9.5 ಇಂಚು ದಪ್ಪದ ಬೃಹತ್ ಬೀಗವೊಂದನ್ನು ಅಯೋಧ್ಯೆಯ ರಾಮಮಂದಿರಕ್ಕಾಗಿ ಸಿದ್ಧಪಡಿಸಿದ್ದಾರೆ. ಇದು ವಿಶ್ವದಲ್ಲೇ ಕೈಯಿಂದ ತಯಾರಿಸಿದ ಅತಿದೊಡ್ಡ ಬೀಗ ಎಂದು ಇದರ ತಯಾರಕ ಸತ್ಯಪ್ರಕಾಶ್ ಶರ್ಮಾ ಹೇಳಿಕೊಂಡಿದ್ದಾರೆ.

ಸುಮಾರು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಬೀಗ ನಿರ್ಮಿಸಲಾಗಿದ್ದು, ಇದರಲ್ಲಿ ರಾಮನ ಚಿತ್ರವಿದೆ. ಇದನ್ನು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗೆ ಉಡುಗೊರೆಯಗಿ ನೀಡಲು ಶರ್ಮಾ ಬಯಸಿದ್ದು, ಇದನ್ನು ದೇವಾಲಯದ ಆವರಣಲ್ಲಿ ಬಳಸಿಕೊಳ್ಳುವ ನಿರೀಕ್ಷೆ ಇದೆ. ನೌರಂಗಾಬಾದ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲೇ ಬೀಗ ತಯಾರಿಕಾ ಘಟಕವನ್ನು ನಿರ್ವಹಿಸುತ್ತಿರುವ ಶರ್ಮಾ, “ಬಾಲ್ಯದಿಂದಲೂ ನಾನು ಬೀಗ ತಯಾರಿಸುತ್ತಿದ್ದೇನೆ. ವಿಶಿಷ್ಟವಾದ್ದನ್ನು ಮಾಡಬೇಕು ಎಂಬ ಕಾರಣಕ್ಕೆ ನಾನು ದೇವಸ್ಥಾನಕ್ಕಾಗಿ ಬೃಹತ್ ಬೀಗ ಸಿದ್ಧಪಡಿಸಲು ಯೋಚಿಸಿದ್ದೆ” ಎಂದು ಹೇಳುತ್ತಾರೆ. ಇದೀಗ ಈ ವಿಶಿಷ್ಟ ಸೃಷ್ಟಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ಅವರು ನಿರತರಾಗಿದ್ದಾರೆ. “ಬೀಗಕ್ಕಾಗಿ ಸ್ಟೀಲ್ ಮತ್ತು ಹಿತ್ತಾಳೆಯನ್ನು ದೇಣಿಗೆಯಾಗಿ ನೀಡುವವರಿಗಾಗಿ ಹುಡುಕುತ್ತಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೀಗವನ್ನು ಈಗಾಗಲೇ ಅವರ ಮನೆ ಇರುವ ಲೇನ್‍ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

LEAVE A REPLY

Please enter your comment!
Please enter your name here