ಪ್ರಾಣಿ ಪ್ರಪಂಚ-52

ಮಕ್ಕಳಿಗಾಗಿ ವಿಶೇಷ ಮಾಹಿತಿ

ಬೀವರ್(Castor canadensis)

ಕೆನಡಾ ದೇಶದ ರಾಷ್ಟ್ರಪ್ರಾಣಿ ಆದ ಬೀವರ್‌ ಗಳು ಕೆನಡಾ ಮಾತ್ರವಲ್ಲದೆ ಮೆಕ್ಸಿಕೊ ಹಾಗು ಉ.ಅಮೇರಿಕಾದಲ್ಲಿ ಹೆಚ್ಚು ಕಂಡುಬರುತ್ತದೆ.

ಪ್ರಪಂಚದಲ್ಲಿನ ಅತ್ಯಂತ ದೈತ್ಯ ಹೆಗ್ಗಣ ಎಂದರೆ ಬೀವರಗಳು.4 ಅಡಿ ಉದ್ದ ಹಾಗೂ 60ಪೌಂಡ್‌ (25ಕೆಜಿ) ತೂಕವಿರುತ್ತದೆ. ಇವುಗಳ ಹಲ್ಲುಗಳು ಸದಾಕಾಲ ಬೆಳೆಯುತ್ತಲೇ ಇದ್ದು ಹಲ್ಲುಗಳ ಬೆಳವಣಿಗೆ ನಿಲ್ಲುವುದೇ ಇಲ್ಲ. ಆದರೆ ಇದನ್ನು ಬೀವರ್‌ ಗಳು ಮರದ ಚೂರು/ದಿಮ್ಮಿಗಳನ್ನು ಸದಾ ಕೊರೆದು ಕೊರೆದು ಹಲ್ಲುಗಳು ಅತೀ ಉದ್ದ ಬೆಳೆಯದಂತೆ ನಿಯಂತ್ರಿಸುತ್ತದೆ.ಸಾಮಾನ್ಯವಾಗಿ ಇಪ್ಪತ್ತು ವರ್ಷ ಬದುಕುಳಿಯುವ ಬೀವರ್‌ಗಳು ತಾವಿರುವ ಸೀಮೆಯನ್ನು ತನ್ನ ದೇಹ ಹೊರಸೂಸುವ ಪರಿಮಳದಿಂದ ಮಣ್ಣಿನ ರಾಶಿಯ ಮೇಲೆ ಗುರುತುಮಾಡಿ ಇತರ ಪ್ರಾಣಿಗಳು ತನ್ನ ಗಡಿಯನ್ನು ಆಕ್ರಮಿಸದಂತೆ ತನ್ನ ಸಂಸಾರವನ್ನು ಜೋಪಾನ ಮಾಡುತ್ತದೆ.

ಬೀವರ್‌ ಗಳು ವಿಶಿಷ್ಟವಾದ ಗೂಡು,ಬಿಲ, ಅಣೆಕಟ್ಟು ಹಾಗೂ ಮನೆಗಳನ್ನು ಕಟ್ಟಲು ಹೆಸರುವಾಸಿ. ಗುಮ್ಮಟಾಕಾರದ ಆಣೆಕಟ್ಟುಗಳನ್ನು ಕಟ್ಟಿ ಅವಕ್ಕೆ 2 ಪ್ರವೇಶದ್ವಾರಗಳನ್ನು ಮಾಡಿರುತ್ತದೆ. ಕೆಲವೊಮ್ಮೆ ಬೀವರ್‌ ಕಟ್ಟುವ ಗುಮ್ಮಟಾಕಾರದ ಮನೆಗಳು 10ಅಡಿ ಎತ್ತರವೂ ಇರುತ್ತದೆ. ಇವುಗಳು ಕಟ್ಟುವ ಬಿಲಗಳು ಅಥವಾ ಗೂಡು ಗಾಳಿ ಹಾಗೂ ತೇವಾಂಶವನ್ನು ಸಮತೋಲನದಲ್ಲಿ ಇಡುತ್ತದೆ.

ಬೀವರ್‌ ಗಳು ಉಭಯವಾಸಿ ಜೀವಿಗಳು. ಸದಾ ತೇವಾಂಶವಿರುವ ಕೆಸರು,ಬುರುಡೆ,ನದಿ,ಕೆರೆ,ಕುಂಟೆ ತೀರಗಳಲ್ಲಿ ಜೀವಿಸುತ್ತದೆ.

LEAVE A REPLY

Please enter your comment!
Please enter your name here