ಮಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ಒಂದೇ ದಿನ ಐದು ತಲೆಮಾರಿನ 5 ಸದಸ್ಯರಿಗೆ ಮಹಿಳಾ ಸಮ್ಮಾನ್ ಮಾಡಿದ ವಿಶಿಷ್ಟ ಕಾರ್ಯಕ್ರಮವೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಡೆದಿದೆ. ಅಂಚೆ ಇಲಾಖೆ, ಮೂಲ್ಕಿ ಪ್ರೆಸ್ ಕ್ಲಬ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ನಡೆದ ಆಧಾರ್ ತಿದ್ದುಪಡಿ ಕಾರ್ಯಕ್ರಮದಲ್ಲಿ ಈ ಅಪರೂಪದ ವಿದ್ಯಮಾನ ನಡೆದಿದೆ.
ಕಿನ್ನಿಗೋಳಿಯ ನೇಕಾರ ಸೌಧದಲ್ಲಿ ಅಂಚೆ ಇಲಾಖೆ, ಮೂಲ್ಕಿ ಪ್ರೆಸ್ ಕ್ಲಬ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್
ಮತ್ತು ಇನರ್ ವೀಲ್ ಕ್ಲಬ್ ವತಿಯಿಂದ ನಡೆದ ಆಧಾರ್ ತಿದ್ದುಪಡಿ ಮತ್ತು ಅಂಚೆ ಇಲಾಖೆಯ ವಿವಿಧ
ಯೋಜನೆಗಳ ನೋಂದಾಣಿ ಕಾರ್ಯಕ್ರಮದಲ್ಲಿ ಸುಮಾರು 400 ಮಂದಿಯ ಆಧಾರ್ ತಿದ್ದುಪಡಿ ಮಾಡಿದ್ದು
ಮತ್ತು ಹಲವು ಮಂದಿ ಇಲಾಖೆಯ ಇನ್ನಿತರ ಯೋಜನೆಗಳನ್ನು ಪಡೆದಿದ್ದಾರೆ. ಮಾತ್ರವಲ್ಲದೆ
ದೇಶದಲ್ಲೇ ಮೊದಲ ಬಾರಿಗೆ 3 ವರ್ಷದ ಮಗುವಿನಿಂದ 103 ವರ್ಷದ ಅಜ್ಜಿಯವರೆಗೆ ಒಂದೇ ಕುಟುಂಬದ ಐದು ತಲೆಮಾರುಗಳ ಐದು ಮಹಿಳಾ ಸದಸ್ಯರನ್ನು ಉಚಿತ ಮಹಿಳಾ ಸಮ್ಮಾನ್ ಮಾಡಿ ಅಂಚೆ ಇಲಾಖೆ
ಗೌರವಿಸಿದೆ. ಒಂದೇ ದಿನ ಒಂದೇ ಕುಟುಂಬದ ಐವರನ್ನು ಅದರಲ್ಲೂ ಐದು ತಲೆಮಾರಿನವರಿಂದ ಖಾತೆ
ಮಾಡಿಸಿದ್ದು ದೇಶದಲ್ಲೇ ಮೊದಲನೆಯದ್ದಾಗಿದೆ. ಇದು ಒಂದು ವಿಶೇಷ ಕಾರ್ಯಕ್ರಮವಾಗಿದೆ ಎಂದು
ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ 103 ವರ್ಷದ ಕುಪ್ಪೆಪದವಿನ ಬೊಳಿಯದ ಸೀತು, ಅವರ ಮಗಳು 72 ವರ್ಷದ
ಕೈಕಂಬ ಬೊಳ್ಳೂರಿನ ಸುಂದರಿ, ಇವರ ಮಗಳು ಪೆರ್ಮಂಕಿ ಉಳಾಯಿಬೆಟ್ಟುವಿನ ಯಮುನಾ, ಇವರ ಮಗಳು
33 ವರ್ಷದ ಏಳಿಂಜೆ ಪಟ್ಟೆಯ ಪವಿತ್ರ ವಿಜಯ ಹಾಗೂ ಇವರ ಮಗಳು 3 ವರ್ಷದ ದಿತ್ಯ ಈ ಐವರು ಕಿನ್ನಿಗೋಳಿ ನೇಕಾರ ಸೌಧದಲ್ಲಿ ನಡೆದ ಆಧಾರ್ ತಿದ್ದುಪಡಿ ಶಿಬಿರದಲ್ಲಿ ಮಹಿಳಾ ಸಮ್ಮಾನ್ ಖಾತೆ ಮಾಡುವ ಮೂಲಕ ಲಕ್ಷಾಂತರ ಜನರ ಗಮನ ಸೆಳೆದಿದ್ದಾರೆ. ಕಳೆದ ಎಪ್ರಿಲ್ 1ರಿಂದ ಮಹಿಳಾ ಸಮ್ಮಾನ್ ಉಳಿತಾಯ ಖಾತೆ ಮಹಿಳೆಯಗಾಗಿ ಆರಂಭಿಸಿದ್ದು, ಈ ಯೋಜನೆಯನ್ನು ಈ ಐದು ತಲೆಮಾರಿನ ಕುಟುಂಬ ಸದಸ್ಯರಿಗೆ ಮಾಡಿದ್ದು ವಿಶೇಷವಾಗಿದೆ.
103 ವರ್ಷದ ಅಜ್ಜಿ ಸೀತು ಅವರು ತಮ್ಮ ಕುಟುಂಬ ಸದಸ್ಯರ ಜೊತೆ ಟಿಕ್ ಟಾಕ್ ಮತ್ತು ರೀಲ್ಸ್ ನಲ್ಲೂ ಭಾಗವಹಿಸುತ್ತಿದ್ದು, ಮನೆಯಲ್ಲಿನ ಚಿಕ್ಕ ಪುಟ್ಟ ಕೆಲಸಗಳನ್ನೂ ಮಾಡುತ್ತಾರೆ. ಆಧುನಿಕ ಜೀವನ ಶೈಲಿಯಲ್ಲಿ
ಇಂದಿನ ಯುವ ಜನತೆ ಬಿ.ಪಿ , ಶುಗರ್ ನಲ್ಲಿ ಬಳಲುತ್ತಿದ್ದರೂ, 103 ವರ್ಷದ ಅಜ್ಜಿ ಯಾವುದೇ ಸಮಸ್ಯೆ ಇಲ್ಲದೆ ಕುಟುಂಬ ಸದಸ್ಯರೊಂದಿಗೆ ಬದುಕುತ್ತಿದ್ದಾರೆ, ಅಜ್ಜಿ ಒಟ್ಟು 8 ಮಕ್ಕಳಿದ್ದು ಐದು ಹೆಣ್ಣು, 3 ಗಂಡು ಮಕ್ಕಳನ್ನು ಪಡೆದಿದ್ದಾರೆ, ಇವರ ಮಕ್ಕಳು ಮರಿಮಕ್ಕಳು ಸೇರಿ ಇವರ ಕುಟುಂಬದಲ್ಲಿ ಇವರ ನಂತರ ಒಟ್ಟು 55 ಮಂದಿ ಇದ್ದಾರೆ. ಎರಡು ಮೂರು ತಲೆಮಾರಿನವರೇ ಕಾಣಸಿಗುವ ಇಂದಿನ ದಿನದಲಿ ಐದು ತಲೆಮಾರಿನ ಆರು ಮಂದಿಯನ್ನು ಕಾಣುವ ಬಾಗ್ಯ ಆ ಕುಟುಂಬದವರಿಗೆ ಮಾತ್ರವಲ್ಲ ಸಾವಿರಾರು ಜನರಿಗೆ
ಲಭಿಸಿದೆ.