ಗೀಲ ಮಾನ್ಸಟರ್ (Heloderma suspectum)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಈ ಪ್ರಾಣಿಯು ಹಲ್ಲಿ ಜಾತಿಗೆ ಸೇರಿದೆ ದೊಡ್ಡ ತಳಿಯಾಗಿದೆ. ಇವು ಹೆಚ್ಚಾಗಿ ದಕ್ಷಿಣ ಅಮೇರಿಕಾದ ಕೆಲಭಾಗಗಳಲ್ಲಿ, ಮೆಕ್ಸಿಕೋ ಪ್ರಾಂತದಲ್ಲಿ ಕಂಡುಬರುತ್ತವೆ. ಮಧ್ಯ ಅಮೇರಿಕಾದ ಒಣಪ್ರದೇಶಗಳಲ್ಲಿ ಸುತ್ತಾಡುತ್ತಿರುತ್ತವೆ. ರಕ್ಷಿತ ಪ್ರದೇಶಗಳಲ್ಲಿ ಕುರುಚಲು ಗಿಡಗಳ ಪೊದೆಗಳಲ್ಲಿ, ಚಿಕ್ಕ ಕಾಡು, ಅರೆ ಮರುಭೂಮಿಯಲ್ಲಿ ವಾಸಿಸುತ್ತವೆ. ಇವುಗಳಿಗೆ ಬಲಶಾಲಿಯಾದ ಗಿಡ್ಡಕಾಲುಗಳಿರುತ್ತವೆ. ಮೊನಚಾದ ಉದ್ದ ಉಗುರುಗಳಿದ್ದು ಅವುಗಳನ್ನು ಬಿಲವನ್ನು ಅಗೆಯಲು ಉಪಯೋಗಿಸುತ್ತವೆ. ಇವು ಹೆಚ್ಚು ಸಮಯವನ್ನು ಬಿಲದಲ್ಲಿಯೇ ಕಳೆಯುತ್ತವೆ.