ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯನ್ನು ಕಚ್ಚಿ ಎಳೆದೊಯ್ದು ತಿಂದ ಮೊಸಳೆ-ವಿಡಿಯೋ ವೈರಲ್

ಮಂಗಳೂರು(ದೆಹಲಿ): ಒಡಿಶಾದ ಜಜ್‌ಪುರ ಜಿಲ್ಲೆಯ ನದಿ ದಡದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಮೊಸಳೆಯೊಂದು ತಿಂದು ಹಾಕಿರುವ ಭೀಕರ ಘಟನೆ ನಡೆದಿದೆ.

ಮೊಸಳೆ ಮಹಿಳೆಯನ್ನು ನದಿ ನೀರಿಗೆ ಎಳೆದೊಯ್ದು ಕಚ್ಚುತ್ತಿರುವ ದೃಶ್ಯವನ್ನು ಅಲ್ಲಿದ್ದ ಜನರು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಒಡಿಶಾದ ಜಾಜ್‌ಪುರ ಜಿಲ್ಲೆಯ ಪಲತ್‌ ಪುರ್ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೃತರನ್ನು ಜ್ಯೋತ್ಸ್ನಾ ರಾಣಿ ಎಂದು ಗುರುತಿಸಲಾಗಿದೆ. ಈಕೆ ಬಿರುಪಾ ನದಿಯ ದಡದಲ್ಲಿ ಸ್ನಾನ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಮೊಸಳೆ ನದಿಯಿಂದ ಹಾರಿ, ರಾಣಿಯನ್ನು ಹಿಡಿದೆಳಿದಿದೆ. ನಂತರ ಸ್ವಲ್ಪ ಆಳವಿರುವ ಭಾಗಕ್ಕೆ ಹೋಗಿ ಅಲ್ಲಿ ಆಕೆಯನ್ನು ಕಚ್ಚಿ ತಿಂದಿದೆ. 49 ಸೆಕೆಂಡುಗಳ ಈ ವಿಡಿಯೋದಲ್ಲಿ ಮಹಿಳೆಯನ್ನು ಮೊಸಳೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಆ ನಂತರ ಆಕೆಯ ದೇಹವನ್ನು ತಿನ್ನುತ್ತಿರುವುದೂ ಕಾಣಿಸುತ್ತದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here