ಪ್ರಾಣಿ ಪ್ರಪಂಚ-66

ಹಿಪ್ಪೊಪೋಟಮಸ್‌ (Hippopotamus amphibious)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಹಿಪ್ಪೊಪೋಟಮಸ್ (ನೀರು ಕುದುರೆಯು) ದೊಡ್ಡ ಸಸ್ತನಿಯಾಗಿದೆ. ಸಹರಾ ಭೂಮಿಯಲ್ಲಿಯ ನದಿಗಳು, ಸರೋವರಗಳಲ್ಲಿ ಇರುತ್ತವೆ. ಇದು ತಿಮಿಂಗಲಗಳಿಗೆ ನೇರ ಸಂಬಂಧಿಯಾಗಿದೆ. ಈ ಕುದುರೆಗಳಿಗೆ ಬೂದು ಬಣ್ಣದ ಪಿಪಾಯಿ ಆಕಾರದ ದೊಡ್ಡ ದೇಹವು ಐದು ಮೀಟರ್‌ ಉದ್ದವಿದ್ದು, ತೂಕವು ನಾಲ್ಕು ಟನ್‌ ಇರುತ್ತದೆ. ಅದರ ಬಲಿಷ್ಠವಾದ ಗಿಡ್ಡಕಾಲುಗಳಿಂದಾಗಿ ಶೀಘ್ರವಾಗಿ ನಡೆಯಲಾಗುವುದಿಲ್ಲ. ದೊಡ್ಡ ದವಡೆಗಳು ಅದರ ವೈಶಿಷ್ಟ್ಯ. ದವಡೆಯಲ್ಲಿ ಎರಡು ಉದ್ದವಾದ ಕೋರೆ ಹಲ್ಲುಗಳು. 50 ಸೆಂ.ಮೀ. ಉದ್ದವಿರುತ್ತವೆ. ಹೊಡೆದಾಡಲು ಅವುಗಳನ್ನು ಬಳಸುತ್ತವೆ. ತಮ್ಮ ಮೈಯನ್ನು ತಂಪಾಗಿಡಲು ದಿನದ 18 ಗಂಟೆಗಳ ಕಾಲ ನೀರಿನಲ್ಲಿರುತ್ತವೆ. ರಾತ್ರಿ ಅವುಗಳು ಹೊರಬೀಳುತ್ತವೆ. ರಾತ್ರಿಯೆಲ್ಲ ಬೇಟೆಯಾಡಿ ಬೆಳಿಗ್ಗೆ ನೀರಿಗೆ ಮರಳುತ್ತವೆ. ಆಫ್ರಿಕದ ಪ್ರಾಣಿಗಳಲ್ಲಿ ದೊಡ್ಡದು ಮತ್ತು ಅಂಜು ಬುರುಕ ಪ್ರಾಣಿಯಾಗಿದೆ. ಇವು ಗುಂಪುಗಳಲ್ಲಿರುತ್ತವೆ.

LEAVE A REPLY

Please enter your comment!
Please enter your name here