ಪ್ರಾಣಿ ಪ್ರಪಂಚ-73

ಕಾಂಗರೂ (Macropus rufus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಪ್ರಪಂಚದಲ್ಲಿ ಕಾಂಗರೂಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುವುದು ಆಸ್ಟ್ರೇಲಿಯಾ ಹಾಗೂ ನ್ಯೂಜಿನಿಯದಲ್ಲಿ. ಕಾಂಗರೂಗಳು ಸಸ್ಯಹಾರಿ ಜೀವಿಗಳು. ಹುಲ್ಲು, ಎಲೆಗಳು, ಗೆಡ್ಡೆಗೆಣಸನ್ನು ಸೇವಿಸುತ್ತದೆ. ತಿಂಗಳಾನುಗಟ್ಟಲೆ ನೀರಿಲ್ಲದೆ ಜೀವಿಸುತ್ತದೆ. ಈ ಪ್ರಾಣಿಗಳಿಗೆ ನೀರು ಸೇವಿಸುವ ಅಗತ್ಯ ಕಡಿಮೆ. ಬೇಕಾದಲ್ಲಿ ತಮ್ಮಷ್ಟಕ್ಕೆ ಬಾವಿಗಳನ್ನು ತೋಡಿ ನೀರು ಕುಡಿಯುತ್ತವೆ.

ಫಲವತ್ತಾಗಿ ನಿಂತ ಬೆಳೆಗಳನ್ನು ತಿಂದು ಹಾನಿ ಮಾಡುವುದರಿಂದ ಕಾಂಗರೂಗಳನ್ನು ಬೆಳೆನಾಶಕ ಪ್ರಾಣಿ ಎಂದು ಪರಿಗಣಿಸಲಾಗಿದೆ. 47 ಪ್ರಜಾತಿಗಳನ್ನುಳ್ಳ ಕಾಂಗರೂ ನಿಶಾಚರಿಗಳಾಗಿದ್ದು ಗುಂಪುಗಳಲ್ಲಿ ಬೀಡುಬಿಡುತ್ತವೆ. ಸಂಕೋಚದ ಸ್ವಭಾವವನ್ನು ಹೊಂದಿರುತ್ತವೆ. 74 ಕಿ.ಮೀ  ಪ್ರತಿ ಘಂಡೆ ವೇಗದಲ್ಲಿ ಜಿಗಿಯುತ್ತದೆ ಹಾಗೂ ಒಂದು ಜಿಗಿತಕ್ಕೆ 30 ಅಡಿ ಅಥವಾ 9 ಮೀ. ಉದ್ದಕ್ಕೆ ನೆಗೆಯುತ್ತದೆ.

33 ದಿನಗಳಲ್ಲಿ ಮೊಟ್ಟೆಯೊಡೆದು ಮರಿಯಾಗಿ ತಾಯಿ ಚೀಲವನ್ನು ಸೇರಿ 190 ದಿನಗಳ ಬಳಿಕ ಚೆನ್ನಾಗಿ ಬೆಳೆದು ಚೀಲದಿಂದ ತಲೆ ಹೊರಹಾಕಿ ಇಣುಕಿ ನೋಡಿ ಪ್ರಪಂಚವನ್ನು ಸುತ್ತಮುತ್ತಲ ವಾಸ್ತವವನ್ನರಿತು 235 ದಿನಗಳ ಬಳಿಕ ತಾಯಿ ಚೀಲದಿಂದ ಬೇರ್ಪಟ್ಟ ಸ್ವತಂತ್ರವಾಗಿ ಚಲಿಸುತ್ತದೆ.

LEAVE A REPLY

Please enter your comment!
Please enter your name here