ಸೂರ್ಯನ ಅಧ್ಯಯನಕ್ಕೆ ಸೆಪ್ಟೆಂಬರ್‌ 2ರಂದು ಆದಿತ್ಯ-ಎಲ್1 ಉಡಾವಣೆ: ಇಸ್ರೊ

ಮಂಗಳೂರು(ಬೆಂಗಳೂರು): ಇಸ್ರೊದ ಮಹತ್ವಾಕಾಂಕ್ಷಿ ಚಂದ್ರಯಾನ–3 ಯಶಸ್ವಿಯಾದ ಬೆನ್ನಲೇ ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಸಂಸ್ಥೆ ಸಿದ್ಧತೆ ನಡೆಸಿದೆ. ಸೆಪ್ಟೆಂಬರ್‌2 ರಂದು ಶನಿವಾರ ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ‘ಆದಿತ್ಯ ಎಲ್‌–1’ ಅನ್ನು ಉಡಾವಣೆ ಮಾಡುವುದಾಗಿ ಇಸ್ರೊ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ವೀಕ್ಷಕರಿಗೂ ನೇರವಾಗಿ ವೀಕ್ಷಿಸಲು ಸಂಸ್ಥೆ ಅವಕಾಶ ನೀಡಿದ್ದು, ನೋಂದಣಿ ಮಾಡಿಕೊಂಡು ಶ್ರೀಹರಿಕೋಟಾಕ್ಕೆ ಬರುವಂತೆ ಆಹ್ವಾನಿಸಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸೂರ್ಯನ ಅಧ್ಯಯನದ ‘ಆದಿತ್ಯ-ಎಲ್1’ ಯೋಜನೆ ಕೈಗೊಳ್ಳಲಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ದಿನಾಂಕ ಘೋಷಿಸುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದರು.

LEAVE A REPLY

Please enter your comment!
Please enter your name here