ಪ್ರಾಣಿ ಪ್ರಪಂಚ-75

ಲಾಮಾ (Lama glama)

ಮಕ್ಕಳಿಗಾಗಿ ವಿಶೇಷ ಮಾಹಿತಿ

ದ. ಅಮೇರಿಕಾದ ಆಂಡೆಸ್‌ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಲಾಮಾ, ಒಂಟೆ ಹಾಗೂ ಕತ್ತೆಗಳ ಮಿಶ್ರಿತ ರೂಪುರೇಷೆಯನ್ನು ಹೊಂದಿರುತ್ತದೆ.

ಈ ಲಾಮಾ ಒಂದು ಸಸ್ಯಾಹಾರಿ ಪ್ರಾಣಿ. ಹುಲುಸಾಗಿ ಬೆಳೆದ ಹುಲ್ಲು, ಹಸಿರು ಎಲೆಗಳು ಹಾಗೂ ಎಳೇಗಿಡಗಳು, ತೇವ ನೀರಿರುವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವುದು.

ಲಾಮಾಗಳನ್ನು ಅವುಗಳ ಮಾಂಸ, ಉಣ್ಣೆ, ಚರ್ಮಕ್ಕಾಗಿ ಮನುಜರು ಬೇಟೆಯಾಡುತ್ತಾರೆ ಹಾಗೂ ಇವುಗಳನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಸಾರಿಗೆಯ ವ್ಯವಸ್ಥೆಯನ್ನಾಗಿಸಿ, ಇವುಗಳ ಮೇಲೆ ಹೊರೆಗಳನ್ನು ಹಾಕಿ ಸಾಗಿಸುತ್ತಾರೆ.

ಲಾಮಾಗಳು ಸಮಾಜ ಜೀವಿಗಳು. ಹಿಂಡುಗಳಲ್ಲಿ ಜೀವನ ನಡೆಸುತ್ತವೆ. ಇವುಗಳು ಬುದ್ಧಿವಂತ ಪ್ರಾಣಿಗಳು. ಮಾನವನು ಇವುಗಳನ್ನು ಸುಲಭವಾಗಿ ತರಬೇತಿ ಕೊಟ್ಟು ಪಳಗಿಸಬಹುದಾಗಿದೆ.

12 ತಿಂಗಳ ಗರ್ಭಾವಸ್ಥೆಯ ನಂತರ ಮರಿ (ಕ್ರಿಯಾ)ಗಳು ಜನಿಸುತ್ತವೆ. ಆಶ್ಚರ್ಯದ ವಿಷಯವೆಂದರೆ ಹುಟ್ಟಿದ ಅರ್ಧ ಗಂಟೆಯ ಅವಧಿಯಲ್ಲಿ ಕ್ರಿಯಾ/ಮರಿಗಳು ನಿಂತು, ನಡೆದಾಡುವುದನ್ನು ಆರಂಭಿಸುತ್ತವೆ. ಲಾಮಾಗಳ ದಟ್ಟ ನುಣುಪಾದ, ಕೂದಲು/ರೋಮಗಳಿಂದ ಗೊಂಬೆಗಳನ್ನು ತಯಾರಿಸುತ್ತಾರೆ.

LEAVE A REPLY

Please enter your comment!
Please enter your name here