ಪ್ರಾಣಿ ಪ್ರಪಂಚ-84

ಪ್ಲಾಟಿಪಸ್‌ (Ornithorhynchus anatinus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಪ್ಲಾಟಿಪಸ್‌ ನಿಶಾಚರಿ ಸಸ್ತನಿ. ರಾತ್ರಿಯೇ ಬೇಟೆಯಾಡುತ್ತದೆ. 2.2-3.3 ಪೌಂಡ್‌ (1ಕೆ.ಜಿ) ತೂಕವಿರುವ 1.3-1.6 ಅಡಿ ಉದ್ದವಿರುವ ಪ್ಲಾಟಿಪಸ್‌ ಆಹಾರವನ್ನು ತನ್ನ ಕೆನ್ನೆಯ ಚೀಲಗಳಲ್ಲಿ ತಾತ್ಕಾಲಿಕವಾಗಿ ತುಂಬಿಸಿಕೊಂಡು ಶೇಖರಿಸಿಕೊಳ್ಳುತ್ತದೆ. ಹಲ್ಲಿಲ್ಲದಿರುವ ಕಾರಣ ಆಹಾರವನ್ನು ಕೊಕ್ಕಿನ (ಮೂತಿ) ಮಧ್ಯೆ ಕಂಡುಬರುವ ನುಣುಪಾದ ತ್ವಚೆಯಿಂದ ಅರಿಯುತ್ತದೆ.

ಇವುಗಳು ಬಿಲಗಳನ್ನು ತೋಡಿ ಬದುಕುತ್ತದೆ.‌ ಬಿಲಗಳ ದ್ವಾರವನ್ನು ಹಣ್ಣು ತರಕಾರಿಗಳಿಂದ ಮುಚ್ಚಿ ಮರೆಮಾಡಿ ಬದುಕುತ್ತದೆ. ಪ್ಲಾಟಿಪಸ್ ಗಳು ಸಿಹಿನೀರ ಕ್ರಿಮಿಕೀಟಗಳು, ಹುಳುಹುಪ್ಪಟೆಗಳು ಹಾಗೂ ಮೀನಿನ ಮೊಟ್ಟೆಗಳು, ಕಪ್ಪೆಗಳನ್ನು ತಿಂದು ಜೀವಿಸುತ್ತದೆ. ಗಂಡು ಪ್ಲಾಟಿಪಸ್‌ ಹಿಮ್ಮಡಿಯ ಬಳಿ ಟೊಳ್ಳಾದ ಮೊನಚಾದ ರೋಮಗಳಿಂದ ಕೂಡಿದ್ದು ವಿಷಕಾರಿಯಾಗಿರುತ್ತದೆ.

ಪ್ಲಾಟಿಪಸ್‌ ಎರಡು ರೀತಿಯ ಬಿಲಗಳನ್ನು ತೋಡುತ್ತದೆ: (1) ನೆಸ್ಮಿಂಗ್‌ (ಮೊಟ್ಟೆ ಹಾಗೂ ಮರಿ ಅಥವಾ ಸಂತತಿಯನ್ನು ಜೋಪಾನ ಮಾಡುವ ಬಿಲಗಳು). ಈ ತರಹದ ಬಿಲಗಳು ಸುಮಾರು 100 ಅಡಿಗಳವರೆಗೂ ಉದ್ದವಿರುತ್ತದೆ. (ಏಕೆಂದರೆ ಸಂತತಿಯನ್ನು ಜೋಪಾನ ಮಾಡುವುದಕ್ಕಾಗಿ). (2) ಕ್ಯಾಂಪಿಂಗ್‌ (ಬೀಡು ಬಿಡಲು ಎರಡನೇ ವಿಧವಾದ ಬಿಲಗಳನ್ನು ತೋಡುತ್ತೆ). ಈ ತರಹದ ಬಿಲಗಳು ಕೇವಲ 3-13 ಅಡಿ ಉದ್ದವಿರುವುದು.

ನಿಶಾಚರಿಯಾದ್ದರಿಂದ ದಿನದ 17 ಗಂಟೆಗಳು ಬಿಲದೊಳಗೆ ಆರಾಮವಾಗಿ ಕಳೆಯುವುದು. ಬಿಲಗಳು ಎರಡೆರಡು ಪ್ರವೇಶ ಹಾಗೂ ಹೊರ ದ್ವಾರಗಳನ್ನು ಹೊಂದಿರುವುದು. ಬಿಲಗಳು ಸದಾ ನೀರಿನ ಮಟ್ಟದಿಂದ ಕೊಂಚ ಮೇಲೆ ಇದ್ದು ಇವುಗಳ ಪ್ರವೇಶದ್ವಾರವು ಕೆರೆ, ನದಿ, ಕುಂಟೆಯ ದಡಗಳು ಅಥವಾ ಮರದ ಬೇರುಗಳ ಸಮೀಪವಿರುವುದು.

ಪ್ಲಾಟಿಪಸ್‌ ಗಳು ಬಾತುಕೋಳಿಯ ಮೂತಿಯ ಹಾಗೆ ಬೊಚ್ಚುಬಾಯಿ ಇದ್ದು ಕಿವಿಗಳು ಇರುವುದಿಲ್ಲ. ಬಾತುಕೋಳಿಯ ಹಾಗೆ ಪಾದಗಳಲ್ಲಿ ಬೆರಳುಗಳು ಬಲೆಗಟ್ಟಿರುತ್ತದೆ. (Webbed ಫೀಟ್)‌ ಬಾಲವನ್ನು ಹೊಂದಿರುವ ಪ್ಲಾಟಿಪಸ್‌ ದೇಹದ ಐವತ್ತರಷ್ಟು (50%) ಕೊಬ್ಬನ್ನು ಅಲ್ಲಿ (ಬಾಲದಲ್ಲಿ) ಶೇಖರಿಸಿಡುತ್ತದೆ. ದೇಹದ ಮೇಲೆ ಬೆಚ್ಚನೆಯ ನುಣುಪಾದ ತುಪ್ಪಟವನ್ನು ಹೊಂದಿರುತ್ತದೆ. ಇದು ದೇಹವನ್ನು ಶೀತ ಹಾಗೂ ಉಷ್ಣ ಎರಡೂ ಹವಾಮಾನಕ್ಕೂ ಒಗ್ಗುವಂತೆ ಸಹಕರಿಸುತ್ತದೆ. ದೇಹವನ್ನು ಒಣದಾಗಿಯೂ ಇಡುತ್ತದೆ.

 

LEAVE A REPLY

Please enter your comment!
Please enter your name here