ಗಾಂಧಿ-ಸಂಕ್ಷಿಪ್ತ ಜೀವನ ಕಥನ – 5

ಲಂಡನ್ನಿನಲ್ಲಿ ಗಾಂಧಿ: 1888-1891

ಲಂಡನ್‌ ಬ್ರಿಟಿಷ್ ಮಹಾ ಸಾಮ್ರಜ್ಯದ ರಾಜಧಾನಿಯಾಗಿತ್ತು. ಆಧುನಿಕ ಇಂಗ್ಲಿಷ್‌ ಜೀವನ ಶೈಲಿಯ ಕೇಂದ್ರವೂ ಆಗಿತ್ತು. ಯುವಕ ಗಾಂಧೀ ಪ್ರಾರಂಭದಲ್ಲಿ ಇಂಗ್ಲಿಷ್ ಜೀವನ ಶೈಲಿಗೆ ಆಕರ್ಷಿತನಾದ. ನೃತ್ಯ ಕಲಿಯಲು ನೃತ್ಯ ಶಾಲೆಗೆ ಹೋದ. ಯುರೋಪಿನ್ನರಂತೆ ಉಡುಪು ಧರಿಸಿದ . ಅವರಂತೆ ಕಾಣುವ ಚಪಲದಿಂದ ಇಂತಹ ಹಲವು ಪ್ರಯೋಗಗಳನ್ನು ಮಾಡಿದ.

ಇಂಗ್ಲೆಡ್ನಲ್ಲಿ ಮಾಂಸಾಹಾರ ಸಾಮಾನ್ಯವಾಗಿತ್ತು ಆದರೆ ಅದನ್ನು ತಿನ್ನುವಂತಿರಲಿಲ್ಲ. ತಾಯಿ ಮಾಡುತ್ತಿದ್ದ ಅಡುಗೆಯ ರುಚಿ ನೆನಪಾಗುತ್ತಿತ್ತು. ಶಾಖಹಾರಿ ಹೋಟೆಲನ್ನು ಹುಡುಕಿಕೊಂಡು ಪ್ರತಿದಿನ ಹತ್ತರಿಂದ ಹನ್ನೆರಡು ಮೈಲು ತಿರುಗುತ್ತಿದ್ದ. ಒಂದು ದಿನ ಒಂದು ಶಾಖಾಹಾರಿ ಹೋಟೆಲು ಪತ್ತೆಯಾಯಿತು. ಅಲ್ಲಿಯವರೆಗೆ ಒಂದು ರೀತಿಯಲ್ಲಿ ಉಪವಾಸ ಕಳೆಯುತ್ತಿದ್ದ ದಿನಗಳೇ ಆಗಿದ್ದವು. ಹೆನ್ರಿ ಸಾಲ್ಟ್‌ ಎಂಬುವನು ಶಾಖಾಹಾರದ ಮೇಲೆ ಬರೆದ ಪುಸ್ತಕದಿಂದ ಗಾಂಧೀ ಪ್ರಭಾವಿತನಾದ. ಲಂಡನ್ನಿನ ಶಾಖಾಹಾರಿ ಸಂಘಕ್ಕೆ ಸದಸ್ಯನಾಗಿ ನಂತರ ಪದಾಧಿಕಾರಿಯಾಗಿಯು ಚುನಾಯಿತನಾದ.

ಶಾಖಾಹಾರಿ ಸಂಘದಲ್ಲಿ ಕೆಲವು ಥಿಯೋಸಫಿ ಸಂಘದವರು ಇದ್ದರು 1875 ರಲ್ಲಿ ಸ್ಥಾಪಿತವಾದ ಥಿಯೋಸಫಿ ಸಂಘವು ವಿಶ್ವಭ್ರಾತೃತ್ವವನ್ನು ಪ್ರಚುರ ಪಡಿಸುವ ದ್ಯೇಯವನ್ನು ಹೊಂದಿದ್ದ ಒಂದು ಸಂಸ್ಥೆಯಾಗಿತ್ತು .ಭೌಧ ಮತ್ತು ಹಿಂದೂಧರ್ಮಗಳ ಗ್ರಂಥಗಳ ಅಧ್ಯಯನದಲ್ಲಿ ಸಂಘಕ್ಕೆ ವಿಶೇಷ ಆಸಕ್ತಿ ಇತ್ತು. ಭಗವದ್ಗೀತೆಯ ಅಧ್ಯಯನದಲ್ಲಿ ನೆರವಾಗುವಂತೆ ಸದಸ್ಯರು ಗಾಂಧೀಯನ್ನು ಒತ್ತಾಯಿಸಿದರು. ಗಾಂಧೀಗೆ ಧಾರ್ಮಿಕ ವಿಚಾರಗಳ ಬಗ್ಗೆ ಅಷ್ಟೇನು ಆಸಕ್ತಿ ಇರಲಿಲ್ಲ. ಭಗವದ್ಗೀತೆಯನ್ನು ಸಂಸ್ಕೃತ ಭಾಷೆ ಮತ್ತು ಇಂಗ್ಲಿಷ್‌ ಭಾಷಾಂತರದಲ್ಲಿ ಓದುವ ಅವಕಾಶ ಮೊದಲ ಬಾರಿಗೆ ದೊರಕಿತು. ಆನಂತರವೇ ಗಾಂಧೀಗೆ ಹಿಂದೂ ಹಾಗೂ ಕ್ರೈಸ್ತ ಧರ್ಮಗ್ರಂಥಗಳನ್ನು ಓದುವ ಆಸಕ್ತಿ ಉಂಟಾಯಿತು.‌

ಬ್ಯಾರಿಸ್ಟರ್‌ ಗಾಂಧಿ

LEAVE A REPLY

Please enter your comment!
Please enter your name here