ಸೌರಯಾನ: ಭೂಮಿಯ ಪ್ರಭಾವಲಯದಿಂದ ಹೊರ ಚಿಮ್ಮಿದ ಆದಿತ್ಯ ಎಲ್1

ಮಂಗಳೂರು (ಬೆಂಗಳೂರು): ಭಾರತದ ಮೊದಲ ಸೂರ್ಯ ಮಿಷನ್ ನ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಭೂಮಿಯ ಪ್ರಭಾವ ವಲಯದಿಂದ ಯಶಸ್ವಿಯಾಗಿ ಹೊರಚಿಮ್ಮಿದೆ ಎಂದು ಇಸ್ರೋ ತಿಳಿಸಿದೆ.

ಈ ಬಗ್ಗೆ ಇಸ್ರೋ ‘X’ ನಲ್ಲಿ ಟ್ವೀಟ್ ಮಾಡಿದ್ದು ಆದಿತ್ಯ-L1 ಭೂಮಿಯಿಂದ 9.2 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಿದೆ. ಇದು ಈಗ ಸೂರ್ಯ-ಭೂಮಿಯ ಲಗ್ರೇಂಜ್ ಪಾಯಿಂಟ್ 1 (L1) ಕಡೆಗೆ ತನ್ನ ದಾರಿಯನ್ನು ಕಂಡುಕೊಳ್ಳುತ್ತಿದೆ. ಇಸ್ರೋ ಭೂಮಿಯ ಪ್ರಭಾವದ ಗೋಳದ ಹೊರಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುತ್ತಿರುವುದು ಇದು ಎರಡನೇ ಬಾರಿ. ಮೊದಲ ಬಾರಿಗೆ ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿ ಕಳುಹಿಸಲಾಗಿತ್ತು ಎಂದು ತಿಳಿಸಿದೆ.

ಸೆ.2ರಂದು ಪಿಎಸ್‌ಎಲ್‌ವಿ-ಸಿ57 ರಾಕೆಟ್‌ನಿಂದ ಉಡಾವಣೆಯಾಗಿರುವ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯನ್ನು ಲಗ್ರೇಂಜ್ ಪಾಯಿಂಟ್ 1 (L1) ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಇದು ಸೂರ್ಯನ ಕುರಿತಾಗಿ ಅಧ್ಯಯನ ನಡೆಸಲಿದೆ.

LEAVE A REPLY

Please enter your comment!
Please enter your name here