ಆಕಸ್ಮಿಕ ಬೆಂಕಿ – ಸುಟ್ಟು ಕರಕಲಾದ ಕಾರು – ವಿಡಿಯೋ ವೈರಲ್

ಮಂಗಳೂರು ( ಬೆಂಗಳೂರು ): ಆಕಸ್ಮಿಕವಾಗಿ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹತ್ತಿಕೊಂಡು ಸುಟ್ಟು ಕರಕಲಾದ ಘಟನೆ ಬೆಂಗಳೂರು ಜೆಪಿ ನಗರದ ದಾಲ್ಮೀಯ ಮೇಲ್ಸೇತುವೆಯಲ್ಲಿ ಸೆ.30 ರಂದು ನಡೆದಿದೆ. ಕಾರು ಮಾಲಕರೇ ಚಲಾಯಿಸುತ್ತಿದ್ದು ಈ ವೇಳೆ ಬಾನೆಟ್ ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಕಾರು ನಿಲ್ಲಿಸಿ ಹೊರಗೆ ಬಂದಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಾರಿಗೆ ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here